ADVERTISEMENT

ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 17:06 IST
Last Updated 17 ಸೆಪ್ಟೆಂಬರ್ 2022, 17:06 IST
ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಂಗವಾಗಿ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್‌ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು
ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಂಗವಾಗಿ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್‌ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು   

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 75ನೇ ಜನ್ಮದಿನದ ಅಂಗವಾಗಿ ಮಹಾರಾಷ್ಟ್ರದ ಬಾರ್ಸಿಯಲ್ಲಿರುವ ಕೆಎಲ್‍ಇ ಸಿಲ್ವರ್‌ ಜ್ಯೂಬ್ಲಿ ಹೈಸ್ಕೂಲಿನಲ್ಲಿ ಶುಕ್ರವಾರ ಸ್ಪರ್ಧಾತ್ಮಕ ಪುಸ್ತಕಗಳ ತುಲಾಭಾರ ನೆರವೇರಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ಕೊರೆ, ‘ಹಿತೈಷಿಗಳ ಹಾಗೂ ವಿದ್ಯಾರ್ಥಿಗಳ ಪ್ರೀತಿ ಹಾಗೂ ಅಭಿಮಾನಗಳಿಗೆ ಬೆಲೆ ಕಟ್ಟಲಾಗದು. ಹಿರಿಯರ ಪುಣ್ಯದ ಫಲವಾಗಿ ನಾನು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಕೆಎಲ್‍ಇ ಸಪ್ತರ್ಷಿಗಳ ಕನಸುಗಳಿಗೆ ಪಥವಾಗಿ ಮುನ್ನಡೆಯಲು ನನಗೆ ಎಲ್ಲರೂ ಜೊತೆಯಾದರು’ ಎಂದರು.

ಡಾ.ಪ್ರಭಾಕರ ಕೋರೆಯ ಹಾಗೂ ಪತ್ನಿ ಆಶಾತಾಯಿ ಅವರನ್ನು ಸತ್ಕರಿಸಿದರು. ಆಡಳಿತ ಮಂಡಳಿಯ ಸದಸ್ಯರು ಇದ್ದರು. ತುಳಜಾ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.