ADVERTISEMENT

12 ದ್ವಿಚಕ್ರವಾಹನಗಳು ಜಖಂ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2020, 15:38 IST
Last Updated 9 ನವೆಂಬರ್ 2020, 15:38 IST
ಬೆಳಗಾವಿಯ ಕಲಾಮಂದಿರದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಜಖಂಗೊಂಡಿರುವ ದ್ವಿಚಕ್ರವಾಹನಗಳು
ಬೆಳಗಾವಿಯ ಕಲಾಮಂದಿರದ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಜಖಂಗೊಂಡಿರುವ ದ್ವಿಚಕ್ರವಾಹನಗಳು   

ಬೆಳಗಾವಿ: ಇಲ್ಲಿನ ಟಿಳಕವಾಡಿಯಲ್ಲಿರುವ ಕಲಾಮಂದಿರದ ಕಾಂಪೌಂಡ್ ಸೋಮವಾರ ಕುಸಿದು ಬಿದ್ದ ಪರಿಣಾಮ, ಅದಕ್ಕೆ ಹೊಂದಿಕೊಂಡಂತೆ ನಿಲ್ಲಿಸಲಾಗಿದ್ದ 12 ದ್ವಿಚಕ್ರವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲಿ ಆ ಸಂದರ್ಭದಲ್ಲಿ ಜನಸಂಚಾರ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

‘ಸ್ಮಾರ್ಟ್‌ ಸಿಟಿ ಯೋಜನೆ’ಯಲ್ಲಿ ಕಲಾಮಂದಿರದ ಮರುನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಪೌಂಡ್‌ ಏಕಾಏಕಿ ಕುಸಿದಿದೆ. ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದ್ವಿಚಕ್ರವಾಹನಗಳನ್ನು ಹೊರ ತೆಗೆಯಲು ಮಾಲೀಕರು ಹರಸಾಹಸಪಟ್ಟರು. ಅವುಗಳನ್ನು ಹೊರತೆಗೆದಾಗ ಸಂಪೂರ್ಣ ಜಖಂಗೊಂಡಿರುವುದನ್ನು ಕಂಡು ಕೆಲವರು ಮಾಲೀಕರು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT