ADVERTISEMENT

ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಲಭಿಸಲು ಸಾಧ್ಯ: ಶಿಕ್ಷಕ ಈಶ್ವರ ಮಮದಾಪುರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 5:57 IST
Last Updated 12 ಫೆಬ್ರುವರಿ 2026, 5:57 IST
ಗೋಕಾಕ ತಾಲ್ಲೂಕಿನ ಬೆಣಚಿನಮರಡಿ (ಉ) ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕವಿ-ಶಿಕ್ಷಕ ಈಶ್ವರ ಮಮದಾಪುರ ಚಾಲನೆ ನೀಡಿದರು
ಗೋಕಾಕ ತಾಲ್ಲೂಕಿನ ಬೆಣಚಿನಮರಡಿ (ಉ) ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಕವಿ-ಶಿಕ್ಷಕ ಈಶ್ವರ ಮಮದಾಪುರ ಚಾಲನೆ ನೀಡಿದರು   

ಗೋಕಾಕ: ‘ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಲಭಿಸುತ್ತದೆ. ಪ್ರಯತ್ನವಿಲ್ಲದೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ’ ಎಂದು ಕವಿ, ಶಿಕ್ಷಕ ಈಶ್ವರ ಮಮದಾಪುರ ಹೇಳಿದರು.

ತಾಲ್ಲೂಕಿನ ಬೆಣಚಿನಮರ್ಡಿ (ಉ) ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು  ಮಾತನಾಡಿದರು. 

‘ಪುಸ್ತಕವೇ ನಿಜವಾದ ವಿದ್ಯಾರ್ಥಿಗಳ ಮಿತ್ರ ಹಾಗೂ ಮಾರ್ಗದರ್ಶಕವಾಗಿದ್ದು ವಿದ್ಯಾರ್ಥಿಗಳು ಮೊಬೈಲ್ ಗೀಳನ್ನು ತೊರೆದು ಪುಸ್ತಕದ ಹುಳುಗಳಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಉರುಬಿನಹಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಆರ್.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ. ಕುಮಾರಿ ಎ.ಬಿ. ಭರಮಗೌಡರ, ಉಪನ್ಯಾಸಕರಾದ ಪ್ರತಾಪ ಕೊಪ್ಪದ, ಎಂ.ಎನ್.ಧೂಳಿ, ಎಸ್.ಆರ್. ಮಾಳಗಿ, ಎಫ್.ಬಿ.ಯರಗಟ್ಟಿ, ಉಪನ್ಯಾಸಕ ಆರ್‌.ಬಿ.ವಾಜಂತ್ರಿ ಇದ್ದರು.

ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.