
ಹಿರೇಬಾಗೇವಾಡಿ: ಚುನಾವಣೆ ವೇಳೆ ಬರುವ ಮನಸ್ತಾಪ, ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟು, ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಹಕಾರ ತತ್ವ, ಆದರ್ಶದಡಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಗ್ರಾಮದ ಜಾಲಿಕರೆಮ್ಮ ದೇವಿ ಮಂಗಲ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ವೈಯಕ್ತಿಕ ದ್ವೇಷ ಬದಿಗಿಟ್ಟರಷ್ಟೇ ಸಹಕಾರ ಕ್ಷೇತ್ರದಲ್ಲಿ ಯಶಸ್ಸು ಸಾಧ್ಯ’ ಎಂದು ಅವರು ಹೇಳಿದರು.
‘ಬೆಳಗಾವಿ ತಾಲ್ಲೂಕಿನಿಂದ ರಾಹುಲ್ ಜಾರಕಿಹೊಳಿ ಅವರನ್ನು ಜಿಲ್ಲಾ ಸಹಕಾರ ಬ್ಯಾಂಕ್‌ಗೆ ನಿರ್ದೇಶಕರನ್ನಾಗಿ ಮಾಡಲಾಗಿದೆ. ಅವರೊಂದಿಗೆ ಕೈಜೋಡಿಸಿ ರೈತರ ಪರ ಕೆಲಸ ಮಾಡಲಾಗುವುದು. ಒಳ್ಳೆಯ ಕೆಲಸಗಳು ಸಹಕಾರ ರಂಗದಲ್ಲಿ ಆಗುತ್ತಿವೆ. ರೈತರ ಪಾಲಿಗೆ ಸಹಕಾರ ಬ್ಯಾಂಕ್‌ಗಳು ಆರ್ಥಿಕ ಶಕ್ತಿಯಾಗಿವೆ’ ಎಂದರು.
ಸಂತೋಷ ಅಂಗಡಿ, ಬಸಗೌಡ ಪಾಟೀಲ, ಶಂಕರಗೌಡ ಪಾಟೀಲ, ಶಿವನಗೌಡ ಪಾಟೀಲ, ಮಹಾಂತೇಶ ಉಳ್ಳೆಗಡ್ಡಿ, ಬಸನಗೌಡ ಪಾಟೀಲ, ಹಾಲಪ್ಪ ಜಗ್ಗಿನವರ, ರವೀಂದ್ರ ಮೇಳೆದ, ರಘು ಪಾಟೀಲ, ಭರಮಪ್ಪ ಶೀಗಿಹಳ್ಳಿ, ರಾಮಣ್ಣ ಗುಳ್ಳಿ, ಮುಶೆಪ್ಪ ಹಟ್ಟಿ, ಸಂಜಯ ಪಾಟೀಲ, ಯುವರಾಜ ಜಾಧವ, ಚೇತನ ಅಂಗಡಿ, ಮೋಹನ ಅಂಗಡಿ, ಸುರೇಶ ಇಟಗಿ, ಚಂದ್ರಪ್ಪ ಶಿಂತ್ರಿ, ಮಹಾಂತೇಶ ಅಲಾಬಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.