ADVERTISEMENT

ಕುಡಚಿ ಶಾಸಕ ಪಿ.ರಾಜೀವಗೆ ಮಾತೃ ವಿಯೋಗ

​ಪ್ರಜಾವಾಣಿ ವಾರ್ತೆ
Published 20 ಮೇ 2021, 5:56 IST
Last Updated 20 ಮೇ 2021, 5:56 IST
ಶಾಂತಮ್ಮ ಪಾಂಡಪ್ಪ ಲಮಾಣಿ
ಶಾಂತಮ್ಮ ಪಾಂಡಪ್ಪ ಲಮಾಣಿ   

ಬೆಳಗಾವಿ: ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕರೂ ಆಗಿರುವ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಅವರ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ (70) ಕೋವಿಡ್‌ನಿಂದಾಗಿ ಗುರುವಾರ ಬೆಳಿಗ್ಗೆ ನಿಧನರಾದರು.

ಅವರಿಗೆ ಪತಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

‘ನಾನು ಕೂಡ ತಾಯಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದೆ. ಹೀಗಾಗಿ, ಯಾರೂ ನನ್ನನ್ನು ನೋಡಲು ಬಾರದೆ ಸಂತಾಪ ಸೂಚಿಸಬೇಕು’ ಎಂದು ರಾಜೀವ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.