ನಿಪ್ಪಾಣಿ: ಕೋವಿಡ್-19 ದೃಢಪಟ್ಟು ಮನೆಯಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿ ಬ್ಯಾಂಕ್‌ಗೆ ಹೋಗಿ ಬಂದಿದ್ದರ ವಿರುದ್ಧ ನಿಯಮ ಉಲ್ಲಂಘನೆ ಆರೋಪದ ಮೇಲೆ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಆಡಿ ಗ್ರಾಮದ ಯುವಕನ ವಿರುದ್ಧ ಪಿಡಿಒ ಶಿವಾನಂದ ಧನಪಾಲ ತೇಲಿ ಅವರು ವಿಪತ್ತು ನಿರ್ವಹಣಾ ಕಾಯ್ದೆಯಡಿ ಶನಿವಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮೇ 8ರಂದು ಆರೋಗ್ಯ ಇಲಾಖೆಯು ಇವರಿಗೆ ಕೋವಿಡ್ ದೃಢಪಟ್ಟಿರುವುದನ್ನು ವರದಿ ಮಾಡಿತ್ತು. ಅವರಿಗೆ ಮನೆಯಲ್ಲಿ ಕ್ವಾರಂಟೈನ್ ಮಾಡಿ, ಹೊರಬರದಂತೆ ತಿಳಿಸಿದ್ದರು. ಆದರೆ, ಅವರು ಮೇ15ರಂದು ಗ್ರಾಮದ ಬ್ಯಾಂಕ್‌ಗೆ ಹೋಗಿ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ತೆಗೆದಿದ್ದಾರೆ. ಈ ಮೂಲಕ ನಿರ್ಲಕ್ಷ್ಯ ಮಾಡಿ, ರೋಗ ಹರಡುವಂತೆ ವರ್ತಿಸಿದ್ದಾರೆ ಎಂದು ಪಿಡಿಒ ದೂರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.