ADVERTISEMENT

ಕೋವಿಡ್; ಮೃತರ ಸಂಖ್ಯೆ 74ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 7:45 IST
Last Updated 2 ಆಗಸ್ಟ್ 2020, 7:45 IST

ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 219 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 3,449ಕ್ಕೆ ತಲುಪಿದೆ. ಇದಲ್ಲದೇ, ನಾಲ್ಕು ಜನರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರಾದವರ ಸಂಖ್ಯೆ 74ಕ್ಕೆ ತಲುಪಿದೆ.

ರಾಮದುರ್ಗದ 51 ವರ್ಷದ ಪುರುಷ (ಪಿ–124784), ಚಿಕ್ಕೋಡಿಯ 60 ವರ್ಷದ ಪುರುಷ (ಪಿ–114786), ಬೆಳಗಾವಿಯ 50 ವರ್ಷದ ಪುರುಷ (ಪಿ–114560) ಹಾಗೂ ರಾಯಬಾಗದ 60 ವರ್ಷದ ಪುರುಷ (ಪಿ–82802) ಮೃತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT