ಬೆಳಗಾವಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಹೆಸರು, ಉದ್ದು ಹಾಗೂ ಸೂರ್ಯಕಾಂತಿ ಖರೀದಿಗೆ ಜಿಲ್ಲೆಯಲ್ಲಿ ಕೇಂದ್ರಗಳನ್ನು ಆರಂಭಿಸಲಾಗಿದೆ.
ಹೆಸರಿನ ದರ ಕ್ವಿಂಟಲ್‌ಗೆ ₹8,768, ಉದ್ದಿನ ದರ ಕ್ವಿಂಟಲ್‌ಗೆ ₹7,800, ಸೂರ್ಯಕಾಂತಿ ದರ ಕ್ವಿಂಟಲ್‌ಗೆ ₹7,721 ಇದೆ. ನೋಂದಣಿ ಅವಧಿ ಸೆ.29ರಿಂದ 80 ದಿನಗಳವರೆಗೆ ಇದೆ.
ಹೆಸರು, ಉದ್ದಿನ ನೋಂದಣಿ, ಖರೀದಿಗೆ ಸಂಬಂಧಿಸಿದ ಮಾಹಿತಿಗಾಗಿ ಮೊ.ಸಂ.9449864445, 9449864471, ಸೂರ್ಯಕಾಂತಿ ಮಾಹಿತಿಗಾಗಿ ಮೊ.ಸಂ. 9900553048 ಸಂಪರ್ಕಿಸಬಹುದು.
ಹೆಸರು ಖರೀದಿ ಕೇಂದ್ರಗಳು: ರಾಮದುರ್ಗ, ಬೈಲಹೊಂಗಲ, ಗೋಕಾಕ ಮತ್ತು ಸವದತ್ತಿಯ ಟಿಎಪಿಸಿಎಂಎಸ್‌ಗಳು, ಹುಲಕುಂದ, ಮುರಗೋಡ, ಯರಗಟ್ಟಿ, ದೊಡವಾಡ, ಮೂಡಲಗಿಯ ಪಿಕೆಪಿಎಸ್‌ಗಳು.
ಉದ್ದಿನ ಖರೀದಿ ಕೇಂದ್ರಗಳು: ಅಥಣಿಯ ಎಪಿಎಂಸಿ ಯಾರ್ಡ್, ಸವದತ್ತಿ, ಬೈಲಹೊಂಗಲ ಮತ್ತು ಗೋಕಾಕದ ಟಿಎಪಿಸಿಎಂಎಸ್‌ಗಳು, ಕನ್ನಾಳ, ಕಟಗೇರಿ, ತೆಲಸಂಗ, ದೊಡವಾಡ, ಮೂಡಲಗಿ, ಮುರಗೋಡ ಪಿಕೆಪಿಎಸ್‌ಗಳು.
ಸೂರ್ಯಕಾಂತಿ ಖರೀದಿ ಕೇಂದ್ರಗಳು: ರಾಮದುರ್ಗ, ಸವದತ್ತಿ ಮತ್ತು ಗೋಕಾಕದ ಟಿಎಪಿಸಿಎಂಎಸ್‌ಗಳು, ಹುಲಕುಂದ, ಮೂಡಲಗಿಯ ಪಿಕೆಪಿಎಸ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.