ADVERTISEMENT

ಹಳೆ ದ್ವೇಷ | ಮಚ್ಚಿನಿಂದ ಹಲ್ಲೆ ಮಾಡಿ ಯುವಕನ ಕೊಲೆ; ಕಿತ್ತೂರು ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2023, 7:18 IST
Last Updated 18 ಸೆಪ್ಟೆಂಬರ್ 2023, 7:18 IST
ಸಾವು–‍ಪ್ರಾತಿನಿಧಿಕ ಚಿತ್ರ
ಸಾವು–‍ಪ್ರಾತಿನಿಧಿಕ ಚಿತ್ರ   

ಚನ್ನಮ್ಮನ ಕಿತ್ತೂರು (ಬೆಳಗಾವಿ): ತಾಲ್ಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಯುವಕನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದೆ.

ವಿಜಯ ರಾಮಚಂದ್ರ ಆರೇರ್ (32) ಕೊಲೆಯಾದ ಯುವಕ.

ಹಳೆಯ ದ್ವೇಷವೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಅದೇ ಗ್ರಾಮದ ಕಲ್ಲಪ್ಪ ಸೆದೆಪ್ಪ ಕ್ಯಾತನವರ (48)ಸೇರಿ ಹತ್ತು ಮಂದಿ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಭಾನುವಾರ ರಾತ್ರಿ ಯುವಕನೊಂದಿಗೆ ಜಗಳ ತೆಗೆದ ಗುಂಪು ಮಚ್ಚಿನಿಂದ ಹಲ್ಲೆ ಮಾಡಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.