ADVERTISEMENT

‘112 ಸೇವೆ’ಗೆ ₹ 12.89 ಕೋಟಿ ವೆಚ್ಚ: ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 15:49 IST
Last Updated 22 ಜುಲೈ 2021, 15:49 IST

ಬೆಳಗಾವಿ: ತುರ್ತು ಸಂದರ್ಭಗಳಲ್ಲಿ ತ್ವರಿತವಾಗಿ ಸ್ಪಂದಿಸುವುದಕ್ಕಾಗಿ ಜಾರಿಗೊಳಿಸಿರುವ ‘112 ಸಹಾಯವಾಣಿ ಸೇವೆ’ ಅನುಷ್ಠಾನಕ್ಕೆ ಸರ್ಕಾರವು ₹ 12.89 ಕೋಟಿ ವೆಚ್ಚ ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಿಂದ ತಿಳಿದುಬಂದಿದೆ.

ಈ ಕುರಿತ ದಾಖಲೆಗಳನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮ‍ಪ್ಪ ಗಡಾದ ಮಾಧ್ಯಮಕ್ಕೆ ಗುರುವಾರ ಬಿಡುಗಡೆ ಮಾಡಿದ್ದಾರೆ.

‘ನೇಮಕಾತಿ ಮೂಲಕ ಪೊಲೀಸ್ ‌ಬಲ ಹೆಚ್ಚಿಸಿಲ್ಲ. ಮಾಸಾಶನ ಬಿಡುಗಡೆ ಆಗದೆ ಬಹಳ ಕುಟುಂಬಗಳು ಬೀದಿಗೆ ಬಿದ್ದಿವೆ. ಹೀಗಿರುವಾಗ ಸರ್ಕಾರವು ಸಾರ್ವಜನಿಕರ ತೆರಿಗೆ ಹಣವನ್ನುಅನಗತ್ಯವಾಗಿ ವೆಚ್ಚ ಮಾಡಿದೆ’ ಎಂದು ದೂರಿದ್ದಾರೆ.

ADVERTISEMENT

‘ಮಹೀಂದ್ರ ಸ್ಕಾರ್ಪಿಯೊ ಎಸ್-5 ಮಾದರಿಯ 114 ವಾಹನಗಳನ್ನು ₹ 12.12 ಕೋಟಿಯಲ್ಲಿ ಮತ್ತು ₹ 70,28,898 ವೆಚ್ಚದಲ್ಲಿ 11 ಬಜಾಜ್ ಪಲ್ಸರ್ ದ್ವಿಚಕ್ರವಾಹನಗಳನ್ನು ಖರೀದಿಸಲಾಗಿದೆ. ಕೊರೊನಾದಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ, ಹಣವನ್ನು ಪೋಲು ಮಾಡುವ ಅಗತ್ಯವಿತ್ತೇ’ ಎಂದು ಕೇಳಿದ್ದಾರೆ.

‘ವಿಪರ್ಯಾಸವೆಂದರೆ, ಅಗತ್ಯ ಸೇವೆಗಾಗಿ ಖರೀದಿಸಿದ ವಾಹನಗಳು ಮೂಲ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ. ಬದಲಿಗೆ ಅವುಗಳನ್ನು ಸಾರ್ವಜನಿಕರ ವಾಹನ ತಪಾಸಣೆಗೆ ಬಳಸಲಾಗುತ್ತಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.