ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಿಂಧೋಗಿ ಗ್ರಾಮದಲ್ಲಿ ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಬಗ್ಗೆ ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕ್ರಿಪ್ಟೊ ಕರೆನ್ಸಿ ಎಂಬ ಯೋಜನೆ ಬಂದಿದೆ. ಇದರಲ್ಲಿ ಹಣ ಹೂಡಿದರೆ ಶೀಘ್ರ ದ್ವಿಗುಣ ಆಗಲಿದೆ. ನಾವು ಈಗಾಗಲೇ ಹಣ ಹೂಡಿ ಕಾರು, ಬಂಗಲೆ ಖರೀದಿಸಿದ್ದೇವೆ ಎಂದು ಆರೋಪಿಗಳು ಊರ ಜನರನ್ನು ನಂಬಿಸಿದ್ದಾರೆ. ಇದರಿಂದ ಗ್ರಾಮದ ನೂರಾರು ಜನ ಲಕ್ಷ ಲಕ್ಷ ಹಣ ಹೂಡಿದ್ದಾರೆ. ಈಗ ಮೋಸ ಹೋದ ಬಗ್ಗೆ ದೂರು ದಾಖಲಿಸಿದ್ದಾರೆ. ಗ್ರಾಮದವರೇ ಆದ ಶಿವಾನಂದ ಕಲ್ಲೋಳ್ಳಿ, ಸುರೇಶ ಕಟಗನ್ನವರ, ಮಹಾದೇವ ಕಟಗನ್ನವರ, ವಿನಯ ಕರದಗಿ ಹಾಗೂ ಮೋಹನ್ ಸರವಿ ಎನ್ನುವವರ ವಿರುದ್ಧ ದೂರು ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.