ADVERTISEMENT

ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ದಿನಗೂಲಿ ನೌಕರನ ಸಾವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 2:55 IST
Last Updated 13 ಜನವರಿ 2026, 2:55 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಸಂಕೇಶ್ವರ: ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸುಣ್ಣ ಸಾಗಿಸುವ ಬೆಲ್ಟ್‌  ಮೇಲೆ ಬರುತಿದ್ದ ಸುಣ್ಣದ ಚೀಲಗಳನ್ನು ಹಿಡಿದಿಟ್ಟುಕೊಳ್ಳುವಾಗ ಬೆಲ್ಟ್‌ನಲ್ಲಿ ಬಿದ್ದು ದಿನಗೂಲಿ ಕಾರ್ಮಿಕ ಸಚಿನ ಬಸ್ಸಪ್ಪಾ ದ್ಯಾಮನಿ(36) ಮೃತಪಟ್ಟಿದ್ದಾರೆ.

ಇವರು ಇಲ್ಲಿಗೆ ಸಮೀಪದ ಅಮ್ಮಣಿಭಾವಿ ಗ್ರಾಮದವನು. ಈ ಕುರಿತು ಸಂಕೇಶ್ವರ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಕಾರ್ಮಿಕ ಸಂಘದ ಅಧ್ಯಕ್ಷ ಮೋಹನ ಕೋಟಿವಾಲೆ ಆಗ್ರಹಿಸಿದ್ದಾರೆ.

ADVERTISEMENT