ADVERTISEMENT

ಅಥಣಿ: ‘ದಕ್ಷ ಶಿಕ್ಷಕ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 12:49 IST
Last Updated 6 ಸೆಪ್ಟೆಂಬರ್ 2020, 12:49 IST
ಅಥಣಿಯ ಚಿಕ್ಕಟ್ಟಿ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕುಮಟ್ಟದ ‘ದಕ್ಷ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಅಥಣಿಯ ಚಿಕ್ಕಟ್ಟಿ ವಿದ್ಯಾಸಂಸ್ಥೆಯಲ್ಲಿ ತಾಲ್ಲೂಕುಮಟ್ಟದ ‘ದಕ್ಷ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಅಥಣಿ: ‘ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಂಡು ಅವರ ಏಳಿಗೆ ಬಯಸುತ್ತಾ ಸಮಾಜಕ್ಕೆ ಉತ್ತಮ ನಾಗರಿಕರನ್ನು ರೂಪಿಸುವವನೇ ನಿಜವಾದ ಶಿಕ್ಷಕ’ ಎಂದು ಮುಖಂಡ ಸಿ.ಎ. ಇಟ್ನಾಳಮಠ ಹೇಳಿದರು.

ಇಲ್ಲಿನ ಕಾಶಿಬಾಯಿ ಚಿಕ್ಕಟ್ಟಿ ಇಂಗ್ಲಿಷ್‌ ಮಾಧ್ಯಮ ಶಾಲೆಯಿಂದ ಸರ್ಕಾರಿ ಶಾಲೆಯ ಶಿಕ್ಷಕ, ಶಿಕ್ಷಕಿಯರಿಗೆ 2020-21ನೇ ಸಾಲಿನ ‘ದಕ್ಷ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆ ಶಿಕ್ಷಕರು ಅವರ ಮಕ್ಕಳನ್ನು ಕೂಡ ಸರ್ಕಾರಿ ಶಾಲೆಗೆ ಸೇರಿಸಬೇಕು’ ಎಂದರು.

ADVERTISEMENT

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ್ ಚಿಕ್ಕಟ್ಟಿ, ‘ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ದಕ್ಷ ಶಿಕ್ಷಕ ಪ್ರಶಸ್ತಿಯನ್ನು ಪ್ರತಿ ವರ್ಷ ನಮ್ಮ ಸಂಸ್ಥೆಯಿಂದ ಕೊಡುತ್ತಾ ಬಂದಿದ್ದೇವೆ’ ಎಂದು ತಿಳಿಸಿದರು.

ಮಂಗಸೂಳಿ ಸ.ಹಿ.ಪ್ರಾ. ಶಾಲೆಯ ರುಕ್ಮಿಣಿ ನಾಯ್ಕರ್, ಹಲ್ಯಾಳದ ಸ.ಪ್ರೌಢಶಾಲೆಯ ನಾಗಪ್ಪ ಎಸ್. ಉಗಾರ, ಅರುಣ ತುಕಾರಾಮ್ ಜಾಧವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಸುವರ್ಣಾ ಗಡದೆ ಅವರಿಗೆ ‘ಕಾಮ್ಸ್‌’ ಒಕ್ಕೂಟಗಳ ವತಿಯಿಂದ ‘ಗುರು ಸೇವಾ ರತ್ನ’ ನೀಡಲಾಯಿತು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಧರಿಗೌಡ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಬಿಆರ್‌ಸಿ ಎಸ್.ಎ. ಸನದಿ, ಎಸ್.ಎನ್. ಚಿಕ್ಕಮಠ, ಕಿರಣ ಬುರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.