ADVERTISEMENT

ದಸರಾ ಉತ್ಸವ ಕ್ಷುಲ್ಲಕ ರಾಜಕೀಯದಿಂದ ಮುಕ್ತವಾಗಬೇಕು: ಸಚಿವ ಎಚ್.ಕೆ. ಪಾಟೀಲ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:50 IST
Last Updated 1 ಸೆಪ್ಟೆಂಬರ್ 2025, 2:50 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಮೂಡಲಗಿ: ನಾಡಹಬ್ಬ ದಸರಾ ಉತ್ಸವವನ್ನು ಉದ್ಘಾಟಿಸಲಿರುವ ಸಾಹಿತಿ ಬಾನು ಮುಸ್ತಾಕ್‌ ಅವರನ್ನು ಆಹ್ವಾನಿಸಿರುವುದು ಸರಿಯಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.

ಭಾನುವಾರ ಮೂಡಲಗಿಯ ರಡ್ಡಿ ಬ್ಯಾಂಕ್‌ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮೈಸೂರ ದಸರಾವನ್ನು ಸಂಕುಚಿತವಾಗಿ ನೋಡದೆ ವಿಶಾಲ ಮನೋಭಾವದಿಂದ ನೋಡಬೇಕು. ಜಾತ್ಯಾತೀತ ರಾಷ್ಟ್ರದಲ್ಲಿ ಉತ್ಸವಗಳನ್ನು ಇಂಥ ಧರ್ಮದವರೇ ಉದ್ಘಾಟಿಸಬೇಕು ಎನ್ನವುದು ತಪ್ಪು ಎಂದರು.

ಶ್ರೇಷ್ಠವಾಗಿರುವ ಕನ್ನಡ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ದಸರಾ ಉತ್ಸವದಲ್ಲಿ ಜಾತಿ, ಮತ, ಪಂಥ, ಧರ್ಮದ ಥಳಕು ಹಾಕಬಾರದು. ಧರ್ಮದ ಹೆಸರಿನಲ್ಲಿ ಕಿತ್ತಾಟ ಆಗಬಾರದು. ಮೈಸೂರು ಮಹಾರಾಜರು ಅಲ್ಪಸಂಖ್ಯಾತರನ್ನು ಕರೆದುಕೊಂಡು ದಸರಾ ಉತ್ಸವವನ್ನು ಮಾಡಿರುವುದು ಇದೆ. ದಸರಾ ಹಬ್ಬ ಕ್ಷುಲ್ಲಕ ರಾಜಕೀಯದಿಂದ ಮುಕ್ತವಾಗಬೇಕು. ಆ ಮೂಲಕ ಕನ್ನಡ ಸಂಸ್ಕೃತಿಯನ್ನು ಅಭಿವ್ಯಕ್ತಪಡಿಸಿಬೇಕು. ಅಂತರ್‌ರಾಷ್ಟ್ರೀಯವಾಗಿ ಪ್ರಸಿದ್ಧಿಯನ್ನು ಹೊಂದಿರುವ ದಸರಾ ಉತ್ಸವಕ್ಕೆ ಹಿರಿಮೆ ಬರುವಂತೆ ನಾಡಿನ ಜನರು ರಾಜಕೀಯವನ್ನು ಬಿಟ್ಟು ವರ್ತಿಸಬೇಕು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.