ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಲು ಭಿವಶಿ ಪಿಕೆಪಿಎಸ್ ಕಾರಣ: ಅಣ್ಣಾಸಾಹೇಬ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 7:38 IST
Last Updated 19 ಜನವರಿ 2026, 7:38 IST
ನಿಪ್ಪಾಣಿ ತಾಲ್ಲೂಕಿನ ಭಿವಶಿ ಗ್ರಾಮದ ಅಂಬಿಕಾ ಪಿಕೆಪಿಎಸ್ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಪ್ರಾಣಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಹಾಜರಿದ್ದರು
ನಿಪ್ಪಾಣಿ ತಾಲ್ಲೂಕಿನ ಭಿವಶಿ ಗ್ರಾಮದ ಅಂಬಿಕಾ ಪಿಕೆಪಿಎಸ್ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಪ್ರಾಣಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಹಾಜರಿದ್ದರು   

ನಿಪ್ಪಾಣಿ: ಈ ಸನ್ಮಾನ ನನ್ನದಲ್ಲ. ಇದು ಭಿವಶಿ ಗ್ರಾಮದ ಸನ್ಮಾನ. ನೀವು ನನ್ನನ್ನು ಮೊದಲು ಭಿವಶಿ ಗ್ರಾಮದ ಅಂಬಿಕಾ ಪಿಕೆಪಿಎಸ್ ನಿರ್ದೇಶಕರನ್ನಾಗಿ ಮಾಡಿದ್ದೀರಿ. ಈ ಮೂಲಕವೇ ನಾನು ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷನಾಗಿದ್ದೇನೆ. ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ರೈತರಿಗೆ ವಿವಿಧ ರೀತಿಯ ಸಾಲ ನೀಡಲಾಗುತ್ತದೆ. ಕೆಲವು ಸಾಲಗಳು ಬಡ್ಡಿರಹಿತವಾಗಿವೆ. ಇಂದು ಟ್ರ‍್ಯಾಕ್ಟರ್‌ಗಳು, ಪೈಪ್‌ಲೈನ್‌ಗಳು ಮತ್ತು ಸ್ವ-ಸಹಾಯ ಗುಂಪುಗಳಿಗೆ ರೈತರಿಗಾಗಿ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ನೀಡಲಾಗುತ್ತದೆ. ಪಿಕೆಪಿಎಸ್ ಸಂಘಗಳೂ ಸಹ ಪ್ರಯೋಜನ ಪಡೆಯುತ್ತವೆ' ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಜಿಲ್ಲಾ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ತಾಲೂಕಿನ ಭಿವಶಿ ಗ್ರಾಮದ ಅಂಬಿಕಾ ಪಿಕೆಪಿಎಸ್ ಸಂಘದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಅವರು ಮಾತನಾಡದಿರು.

'ಪ್ರಸ್ತುತ ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ ₹6,000 ಕೋಟಿ ಠೇವಣಿಗಳಿವೆ. ಮುಂಬರುವ ದಿನಮಾನಗಳಲ್ಲಿ ₹10,000 ಕೋಟಿ ಠೇವಣಿ ಹೆಚ್ಚಿಸುವ ಗುರಿಹೊಂದಿದ್ದೇವೆ. ಪಿಕೆಪಿಎಸ್ ಸೊಸೈಟಿಯು ಸಾಲ ವಿತರಿಸುವುದರ ಜತೆಗೆ ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಪಂಪ್ ಮುಂತಾದ ವ್ಯವಹಾರಗಳನ್ನು ಸಹ ಮಾಡಬಹುದು. ಆದ್ದರಿಂದ, ಈಗ ಇದನ್ನು ವಿವಿಧ ಉದ್ದೇಶಗಳ ಸಂಘ ಎಂದು ಹೆಸರಿಸಲಾಗಿದೆ. ಸಂಘಕ್ಕೆ ಗೋದಾಮು ನಿರ್ಮಿಸಲು ಸಹಾಯಧನ ನೀಡಲಾಗುತ್ತದೆ. ಸಂಘವು ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ನಿಪ್ಪಾಣಿಯ ವಿರುಪಾಕ್ಷಲಿಂಗ ಮಠದ ಪ್ರಾಣಲಿಂಗ ಸ್ವಾಮಿಜಿ ಅವರು ಉದ್ಘಾಟಿಸಿದರು. ಅಂಬಿಕಾ ಪಿಕೆಪಿಎಸ್ ಅಧ್ಯಕ್ಷೆ ನಿತಿನ ಪಾಟೀಲ ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು. ವಿರುಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮಾತನಾಡಿದರು.

ಹಾಲಶುಗರ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ಪ್ರಕಾಶ ಶಿಂಧೆ, ಅವಿನಾಶ ಪಾಟೀಲ, ಸಮಿತ ಸಾಸನೆ, ಕಿರಣ ನಿಕಾಡೆ, ಆರ್.ಬಿ. ಮಗದುಮ, ಮಧುಕರ ಪಾಟೀಲ, ಬಾಳಾಸಾಹೇಬ ಕದಮ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಢವಣೆ, ಕಿಶೋರ ಹರದಾರೆ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ಕಾಂಬಳೆ, ಸುಜಾತಾ ಚೌಗುಲೆ, ಸುವರ್ಣ ಗುರವ, ರೇಖಾ ಪವಾರ, ಸಂಜಯ ಲೋಹಾರ, ಶರದ ಚೌಗುಲೆ, ವಿಠ್ಠಲ ಚೌಗುಲೆ, ನಿಲೇಶ ಪಾಟೀಲ, ಅಶ್ವಿನಿ ಪಾಟೀಲ, ಸೇರಿದಂತೆ ಗ್ರಾಮಸ್ಥರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಸಚಿನ ಪಾಟೀಲ ನಿರೂಪಿಸಿದರು, ಕಾರ್ಯದರ್ಶಿ ಕೃಷ್ಣಾತ ಹರದಾರೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.