ADVERTISEMENT

ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಲಿ: ಪಂಚಾಕ್ಷರಯ್ಯ ಗಣಾಚಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 8:33 IST
Last Updated 10 ಫೆಬ್ರುವರಿ 2026, 8:33 IST
<div class="paragraphs"><p>ಪಂಚಾಕ್ಷರಯ್ಯ ಗಣಾಚಾರಿ</p></div>

ಪಂಚಾಕ್ಷರಯ್ಯ ಗಣಾಚಾರಿ

   

ಬೆಳಗಾವಿ: ‘ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ 17ನೇ ಬಜೆಟ್‌ ಮಂಡಿಸಬೇಕು’ ಎಂದು ಸರ್ವಧರ್ಮ ಸಿದ್ದರಾಮಯ್ಯ ಜನಸೇವಾ ಫೌಂಡೇಷನ್‌ ಅಧ್ಯಕ್ಷ ಪಂಚಾಕ್ಷರಯ್ಯ ಗಣಾಚಾರಿ ಆಗ್ರಹಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಮಹಾನಗರ ಎರಡನೇ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಮಾರ್ಚ್‌ನಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನವನ್ನು ಇಲ್ಲಿಯೇ ನಡೆಸಬೇಕು. ಬೆಂಗಳೂರಿನ ಬದಲಿಗೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಬಜೆಟ್‌ ಮಂಡಿಸಿ, ಇತಿಹಾಸ ಸೃಷ್ಟಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪ್ರಕಾಶ ಮುಧೋಳ, ಈರಣ್ಣಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.