ADVERTISEMENT

ಮೂಡಲಗಿ: ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 22 ಮೇ 2025, 14:10 IST
Last Updated 22 ಮೇ 2025, 14:10 IST
ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಮಾರಂಭದಲ್ಲಿ ಜಮಖಂಡಿಯ ವೈ.ವೈ. ಕೊಕ್ಕನ್ನವರ ಮಾತನಾಡಿದರು 
ಮೂಡಲಗಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಮಾರಂಭದಲ್ಲಿ ಜಮಖಂಡಿಯ ವೈ.ವೈ. ಕೊಕ್ಕನ್ನವರ ಮಾತನಾಡಿದರು    

ಮೂಡಲಗಿ: ‘ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ನಿಮ್ಮ ಬೆನ್ನ ಹಿಂದೆ ಬರುತ್ತದೆ’ ಎಂದು ಜಮಖಂಡಿಯ ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ವೈ.ವೈ. ಕೊಕ್ಕನ್ನವರ ಹೇಳಿದರು.

ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜಡ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌ ಹಾಗೂ ವಿವಿಧ ವೇದಿಕೆಗಳ ಸಮಾರೋಪ ಮತ್ತು ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದೊಂದಿಗೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮಹೇಶ ಕಂಬಾರ ಮಾತನಾಡಿ, ಪ್ರಸ್ತುತ ಅವಧಿಯಲ್ಲಿ ಸಾಕಷ್ಟು ಸ್ಪರ್ಧೆ ಇದ್ದು, ಅವಕಾಶಗಳು ಸಾಕಷ್ಟು ಇವೆ. ಪ್ರಯತ್ನ ಪಟ್ಟರೆ ಅವಕಾಶಗಳು ದೊರೆಯುತ್ತವೆ ಎಂದರು.

ADVERTISEMENT

ಬಿ.ಎಸ್‌. ಡಬ್ಲ್ಯೂದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಮೊದಲ ರಾಂಕ್‌ ಪಡೆದ ಶಿಲ್ಪಾ ವಡಕಿ, ಬಿ.ಎ. ವಿಭಾಗದಲ್ಲಿ ನಾಲ್ಕನೇ ರಾಂಕ್‌ ಪಡೆದ ಅರ್ಪಿತಾ ಮಳವಾಡ ಹಾಗೂ ನೇಪಾಳದಲ್ಲಿ ಜರುಗಿದ ಅಂತರರಾಷ್ಟ್ರೀಯ  ಕೊಕ್ಕೊದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಚಿನ್ನದ ಪದಕ ಪಡೆದ ಬಿ.ಎ. ವಿದ್ಯಾರ್ಥಿನಿ ಚಂದ್ರಕಾಂತ ಯಂಡ್ರಾಂವಿ ಹಾಗೂ ಕೆಸೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿದರು.

ಪ್ರೊ. ಚೇತನ್‌ರಾಜ ಪ್ರಸ್ತಾವಿಕ ಮಾತನಾಡಿದರು. ಜಾನು ಕುರನಿಂಗ, ಸುಪ್ರತಾ ನಾವಿ ಸ್ವಾಗತಿಸಿದರು, ಪ್ರೊ. ಶಿವಾನಂದ ಚಂಡಕೆ ವರದಿ ವಾಚಿಸಿದರು, ಶಂಕರಯ್ಯ ಬಡಸೂರಮಠ, ಸಾಕ್ಷಿ ಹೊಸೂರ, ವಿದ್ಯಾ ಸಾಯನ್ನವರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.