ADVERTISEMENT

‘ಬಸ್ತವಾಡದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಕಾಮಗಾರಿ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 16:28 IST
Last Updated 17 ಜನವರಿ 2021, 16:28 IST
ಬೆಳಗಾವಿ ತಾಲ್ಲೂಕಿನ ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪವರೆಗೆ ನಿರ್ಮಿಸಿರುವ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು
ಬೆಳಗಾವಿ ತಾಲ್ಲೂಕಿನ ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪವರೆಗೆ ನಿರ್ಮಿಸಿರುವ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು   

ಬೆಳಗಾವಿ: ತಾಲ್ಲೂಕಿನ ಬಸ್ತವಾಡ ಗ್ರಾಮದಿಂದ ಕೊಂಡಸಕೊಪ್ಪವರೆಗೆ ನೂತನವಾಗಿ ನಿರ್ಮಿಸಿರುವ ಡಾಂಬರ್ ರಸ್ತೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಉದ್ಘಾಟಿಸಿದರು.

ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಅವರು, ‘ಬಸ್ತವಾಡ ಗ್ರಾಮದಲ್ಲಿ ಈವರೆಗೆ ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿವೆ. ಗ್ರಾಮಸ್ಥರ ಪ್ರೀತಿ, ಪ್ರೋತ್ಸಾಹ ಹಾಗೂ‌ ವಾತ್ಸಲ್ಯಭರಿತ ಸನ್ಮಾನಕ್ಕೆ ಪಾತ್ರವಾಗಿರುವುದು ನನಗೆ ಖುಷಿ ನೀಡಿದೆ. ನಾನು ಇಷ್ಟೊಂದು ವೇಗವಾಗಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿರುವುದಕ್ಕೆ ಜನರ ಸಹಕಾರ, ಪ್ರೋತ್ಸಾಹವೇ ಕಾರಣ’ ಎಂದರು.

ಮುಖಂಡರಾದ ಅಪ್ಪಯ್ಯ ಬಾಗಣ್ಣವರ, ಮಹಾವೀರ ‌ಸಂಕೇಶ್ವರಿ, ಭರತೇಶ ಸಂಕೇಶ್ವರಿ, ಮಾಣಿಕ, ಮನೋಹರ ಮುಚ್ಚಂಡಿ, ಅಜಿತ ಬಾಗಣ್ಣವರ, ಅರ್ಜುನ ಪಾಟೀಲ, ಮನೋಹರ ಬಾಂಡಗಿ, ಗುಂಡು ಚೌಗುಲೆ, ರಾಜು ಬಡವಣ್ಣವರ, ರಾಮ ಕಾಕತ್ಕರ, ರಾಮ ಚೌಗುಲೆ, ಪಾರೀಸ ಪಾಟೀಲ, ಶ್ರೀನಿಕ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.