ಸವದತ್ತಿ: ಇಲ್ಲಿನ ಗಂಗಾ ಶಂಕರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಜನಜಾಗೃತಿ ವೇದಿಕೆಯಿಂದ ನವಜೀವನ ಸಮಿತಿ ಸದಸ್ಯರ ಸಮಾವೇಶ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಟಿಎಚ್‌ಒ ಸಮಾನವಾಗಿ ಹಲವು ಜನೋಪಯೋಗಿ ಕಾರ್ಯಗಳ ಮೂಲಕ ಸಮಾಜದ ಪ್ರಗತಿಗೆ ಕೊಡುಗೆ ನೀಡುತ್ತಿದೆ. ಮದ್ಯವರ್ಜನ ಶಿಬಿರಗಳಿಂದ ಸಾಕಷ್ಟು ಕುಟುಂಬಗಳು ಇಂದು ನೆಮ್ಮದಿಯ ಜೀವನ ನಡೆಸುತ್ತಿವೆ. ದುಶ್ಚಟಗಳಿಗೆ ದಾಸರಾಗುತ್ತಿರುವ ಯುವ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕಾರ್ಯ ನಡೆಸಿರುವ ಸಂಘ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕವಾಗಿ ಸದೃಢಗೊಳಿಸಲು ಶ್ರಮಿಸುತ್ತಿದೆ. ಧಾರ್ಮಿಕ ತಳಹದಿಯಲ್ಲಿ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಆರ್ಥಿಕ ಸೌಲಭ್ಯ, ಕೆರೆಗಳ ಅಭಿವೃದ್ಧಿ ಸೇರಿ ಹಲವು ಕಾರ್ಯಕ್ರಮ ನಡೆಸಿದೆ ಎಂದರು.
ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಮಾತನಾಡಿ, ಸಾಲ ನೀಡುವ ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಕೊಂಡಿಯಂತೆ ಸೇವೆ ನೀಡುತ್ತಿರುವ ಸಂಸ್ಥೆ ಗ್ರಾಮೀಣ ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಲು ಅನುವು ಮಾಡಿಕೊಟ್ಟಿದೆ. 900ಕ್ಕೂ ಅಧಿಕ ಕೆರೆಗಳ ಅಭಿವೃದ್ಧಿ, 400ಕ್ಕೂ ಅಧಿಕ ನಿರ್ಗತಿಕ ಕುಟುಂಬಗಳಿಗೆ ಸೂರಿನ ಜೊತೆಗೆ ಮಾಸಾಶನ ನೀಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಸುಭದ್ರಗೊಳಿಸಲು ಸುಜ್ಞಾನ ನಿಧಿ, ಶಿಷ್ಯ ವೇತನ ಹೀಗೆ ಹಲವು ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ತಾಲೂಕಿನ 148 ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ, ಶಿಷ್ಯವೇತನ ಮಂಜೂರಾತಿ ಪತ್ರ ಹಾಗೂ ಮದ್ಯವರ್ಜನ ಶಿಬಿರದಲ್ಲಿ ಭಾಗಿಯಾಗಿ ನವಜೀವನ ನಡೆಸಿದ 45 ದಂಪತಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಗಪ್ಪನಕೊಳ್ಳ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶೌಚಾಲಯ ನಿರ್ಮಾಣಕ್ಕೆ ₹ 50 ಸಾವಿರ ಮಂಜೂರಾಗಿದ್ದು, ದೇವಸ್ಥಾನದ ಸಮಿತಿಗೆ ಮಂಜೂರಾತಿ ಪತ್ರ ನೀಡಲಾಯಿತು.
ಪ್ರವೀಣ ಪಟ್ಟಣಶೆಟ್ಟಿ, ಪಲ್ಲವಿ ಪದಕಿ, ಶ್ರೀಧರ ಅಸಂಗಿಹಾಳ, ಸುಭಾಷ್ ಹನಸಿ, ಸುರೇಶ್ ಹಟ್ಟಿ, ಈಶ್ವರ ಕರಿಕಟ್ಟಿ, ಮಹಾಂತೇಶ ಕಾಜಗಾರ, ಸುಬ್ರಾಯ ನಾಯ್ಕ, ಮಹಾಂತೇಶ ಗಾಣಿಗೇರ, ಮಲ್ಲಪ್ಪ ಸಂಶಿ, ರೇಣುಕಾ ಸಂಶಿ ಹಾಗೂ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.