ADVERTISEMENT

ಹಂದಿಗುಂದ: ಕ್ಲಸ್ಟರ್‌ ಶಾಲೆಗಳಿಗೆ ಜಿಲ್ಲಾ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:13 IST
Last Updated 20 ನವೆಂಬರ್ 2025, 2:13 IST
ಹಂದಿಗುಂದ ಕ್ಲಸ್ಟರ್ ಶಾಲೆಗಳಿಗೆ ಎ.ಬಿ.ಮಲಬಣ್ಣವರ ನೇತೃತ್ವದ ತಂಡ ಈಚೆಗೆ ಭೇಟಿ ನೀಡಿತು
ಹಂದಿಗುಂದ ಕ್ಲಸ್ಟರ್ ಶಾಲೆಗಳಿಗೆ ಎ.ಬಿ.ಮಲಬಣ್ಣವರ ನೇತೃತ್ವದ ತಂಡ ಈಚೆಗೆ ಭೇಟಿ ನೀಡಿತು   

ಹಂದಿಗುಂದ: ‘ಎಲ್ಲ ಶಿಕ್ಷಕರು ಕಲಿಕಾ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಮಾಡಲು ಶಿಕ್ಷಕರ ಪಾತ್ರ ಮುಖ್ಯ’ ಎಂದು ಗೋಕಾಕದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎ.ಬಿ.ಮಲಬಣ್ಣವರ ಹೇಳಿದರು.

ಕಲಿಕಾಮಟ್ಟ ಹೆಚ್ಚಿಸಲು ಹಂದಿಗುಂದ ಕ್ಲಸ್ಟರ್ ಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾ ವಿಶೇಷ ತಂಡದಲ್ಲಿ ಆಗಮಿಸಿ ಸಲಹೆ– ಸೂಚನೆಗಳನ್ನು ನೀಡಿ ಮಾತನಾಡಿದರು.

ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಎಲ್‌ಬಿಎ, ಎಫ್‌ಎಲ್‌ಎನ್, ಸೇತುಬಂಧ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ದಾಖಲಾತಿ, ಬಿಸಿಊಟ ನಿರ್ವಹಣೆ, ಪಾಲಕರ ಸಭೆ, ಶಿಕ್ಷಕರ ಪಾಠ ವೀಕ್ಷಣೆ, ದಿನಚರಿ ವಿದ್ಯಾರ್ಥಿಗಳ ಹಾಜರಾತಿ, ಶುದ್ಧ ಕುಡಿಯುವ ನೀರು, ಬಿಸಿಯೂಟದ ಕೊಠಡಿ, ಶೌಚಾಲಯ, ಸೇರಿದಂತೆ ಶಾಲಾ ಮೂಲ ಸೌಕರ್ಯ, ಮೈದಾನ ಸೇರಿದಂತೆ ಮೂಲ ಸೌಕರ್ಯಗಳನ್ನು ವೀಕ್ಷಿಸಿ ಪರಿಶೀಲಿಸಿದರು.

ADVERTISEMENT

ಸಿಆರ್‌ಪಿಗಳಾದ ಎಚ್.ಎನ್. ಬೆಳಗಲಿ, ವಿ.ಐ. ಮಿಲ್ಲಾನಟ್ಟಿ, ಎಸ್.ಎಸ್. ತಳವಾರ, ಆರ್‌.ಎಂ. ತೇಲಿ, ಮುಖ್ಯ ಶಿಕ್ಷಕ ನಾರಾಯಣ ಜಾಧವ, ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಸ್. ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.