ಹುಕ್ಕೇರಿ: ‘ಕ್ಷೇತ್ರದಲ್ಲಿ ಗೆಲ್ಲುವ ವಾತಾವರಣವಿದ್ದರೂ ನನಗೆ ಸೋಲುಂಟಾಯಿತು. ಕಾರ್ಯಕರ್ತರು ಧೃತಿಗೆಡಬಾರದು. ಬರುವ ದಿನಗಳಲ್ಲಿ ಬಿಜೆಪಿಯನ್ನು ಇನ್ನಷ್ಟು ಸಂಘಟಿಸಿ ಗೆಲುವು ಸಾಧಿಸೋಣ’ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಾದ ಜಾತಿ ಸಮೀಕರಣ ಕುರಿತು ವಿವರ ನೀಡಿದರು. ಇನ್ನು ಮುಂದೆಯೂ ತಮ್ಮೆಲ್ಲರ ಜತೆ ಸೇರಿ ಸರ್ಕಾರದಿಂದ ಆಗುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕರ್ತರಾದ ಗುರುರಾಜ ಕುಲಕರ್ಣಿ, ದುರ್ಗಪ್ಪ ಪಾಟೀಲ್, ಈರಗೌಡ ಪಾಟೀಲ್, ರಮೇಶ್ ಡಬ್ಬು, ಪ್ರಭು, ಮಧುಕರ್ ಕರನಿಂಗ್ ಮಾತನಾಡಿದರು.
ಮುಖಂಡರಾದ ಪರಗೌಡ ಪಾಟೀಲ್, ಪಿಂಟು ಶೆಟ್ಟಿ, ಪಿ.ಎಸ್.ಮುತಾಲಿಕ, ಮಹಾವೀರ ಬಾಗಿ, ವಿರೇಶ್ ಗಜಬರ್, ಚಿದಾನಂದ ಕಿಲ್ಲೇದಾರ, ಸಿದ್ರಾಮ ಮುಗಳಿ, ಸವಿತಾ ಏಣಗಿಮಠ, ತ್ರಿವೇಣಿ ಕಾಂಬಳೆ, ಪಟ್ಟಣಶೆಟ್ಟಿ, ರವಿ ಪಾಟೀಲ, ರಾಜು ಚೌಗಲಾ, ಬಸು ನಂದಿಕೋಲಮಠ, ಅಶೋಕ ಹಿರೇಮಠ, ವಿರೂಪಾಕ್ಷಿ ನಿಪ್ಪಾಣಿ, ಅಶೋಕ ರಂಗೋಳಿ, ಮಹಾಂತೇಶ್ ಚೌಗಲಾ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.