
ಪ್ರಜಾವಾಣಿ ವಾರ್ತೆ
ಎಫ್‌ಐಆರ್
ಗೋಕಾಕ: ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಮಲೇರುವ (ಗಾಂಜಾ) ಪದಾರ್ಥ ಸೇವಿಸಿ ಸಾರ್ವಜನಿಕರಿಗೆ ಕಿರಿ-ಕಿರಿ ಉಂಟು ಮಾಡುತ್ತಿದ್ದರು ಎನ್ನಲಾದ ಒಟ್ಟು 12 ಜನರ ವಿರುದ್ಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಪ್ರಕರಣ ದಾಖಲಾಗಿವೆ.
ಅಪಾದಿತರನ್ನು ಮೂಡಲಗಿ ತಾಲ್ಲೂಕಿನ ಅರಭಾವಿಯ ಸಂದೀಪ ಅಶೋಕ ಮಾದರ, ಗೋಕಾಕ ಫಾಲ್ಸ್ʼನ ವಾಲ್ಮೀಕಿ ನಗರದ ಪ್ರಶಾಂತ ರಮೇಶ ಉದ್ದನಾಯಿಕ, ವಿಜಯಪೂರದ ದತ್ತು ಜಗನ್ನಾಥ ಶಿಂಧೆ, ಗೋಕಾಕ ಸುಣಗಾರ ಗಲ್ಲಿಯ ಗಣೇಶ ಮಾರುತಿ ಹೆಳವಗೋಳ, ಉಪ್ಪಾರಗಲ್ಲಿಯ ಪ್ರಜ್ವಲ ಲಕ್ಕಪ್ಪ ಗಮಾನಿ, ಆಚಾರ್ಯಗಲ್ಲಿಯ ಮೀರಾಸಾಬ ರಫೀಕ್ ದೇವಡಿ, ವಿಶಾಲ ಸುರೇಶ ಕಲಾಲ, ವಿಶಾಲ ನೀಲವ್ವ ಮುತ್ತೆಪ್ಪಗೋಳ ಮತ್ತು ಮಲೀಕಜಾನ ದಸ್ತಗೀರಸಾಬ ಶೇಖ, ಲಕ್ಷ್ಮೀ ಬಡಾವಣೆಯ ದೀಪಕ ಅಪ್ಪಣ್ಣ ಸಾಳುಂಕೆ, ಸಂಗಮನಗರ ಬಡಾವಣೆಯ ಫಯಾಜ್ ರಾಜೇಸಾಬ ನದಾಫ್, ಲಕ್ಷ್ಮೀ ಬಡಾವಣೆಯ ಬಾಂಬೆಚಾಳ ನಿವಾಸಿ ಅಲಿಖಾನ ಇಸ್ಮಾಯಿಲ್ ಶಾಭಾಷಖಾನ ಎಂದು ಗುರುತಿಸಲಾಗಿದೆ.