ADVERTISEMENT

ಕಂಪ್ಲಿ | ದ್ವಿತಾ ಮೋಹನ್ ವರ್ಲ್ಡ್‌ ವೈಡ್ ಬುಕ್ ಆಫ್ ರೆಕಾರ್ಡ್ ದಾಖಲೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 3:15 IST
Last Updated 4 ಆಗಸ್ಟ್ 2025, 3:15 IST
ದ್ವಿತಾ ಮೋಹನ್ 
ದ್ವಿತಾ ಮೋಹನ್    

ಕಂಪ್ಲಿ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾಗಿರುವ ಪಟ್ಟಣದ ಮೋಹನ ಕುಮಾರ ದಾನಪ್ಪ, ಸೌಮ್ಯಶ್ರೀ ಅವರ ಆರು ತಿಂಗಳ ದ್ವಿತೀಯ ಪುತ್ರಿ ದ್ವಿತಾ ಮೋಹನ್ ಯಾವುದೇ ನೆರವು, ಬಾಹ್ಯ ಬೆಂಬಲವಿಲ್ಲದೆ ನಿರಂತರ 44 ನಿಮಿಷ 8 ಸೆಕೆಂಡ್ ಕುಳಿತಲ್ಲಿಯೇ ಕುಳಿತುಕೊಂಡಿದ್ದರಿಂದ ವರ್ಲ್ಡ್‌ ವೈಡ್ ಬುಕ್ ಆಫ್ ರೆಕಾರ್ಡ್ ಪುಸ್ತಕದಲ್ಲಿ ದಾಖಲೆಯಾಗಿದೆ.

ಬೆಂಗಳೂರಿನಲ್ಲಿ ಈಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸಂಘಟಕರು ಪ್ರಸ್ತುತ ದಾಖಲೆ ಮಾಡಿದ ಮಗುವಿಗೆ ಪ್ರಮಾಣಪತ್ರ ಮತ್ತು ಪದಕ ವಿತರಿಸಿ ಗೌರವಿಸಿದ್ದಾರೆ ಎಂದು ಮೋಹನ್‍ಕುಮಾರ್ ತಿಳಿಸಿದರು.

ದ್ವಿತಾ ಮೋಹನ್ ಪಡೆದ ಪ್ರಮಾಣಪತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT