
ಕಾಗವಾಡ: ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಲಿದೆ ಎಂದು ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಟಿ.ಬಿ. ಬಡಿಗೇರ ಹೇಳಿದರು.
ಮಂಗಳವಾರ ತಾಲ್ಲೂಕಿನ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಮೂಹ ಮಟ್ಟದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳಲ್ಲಿ ಅಡಗಿರುವ ಜ್ಞಾನವನ್ನು ಇಂತಹ ವೇದಿಕೆ ಮೂಲಕ ಹೊರತಂದು ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಅನುಕೂಲವಾಗಲಿದೆ’ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಪಿಂಟು ಮುಂಜೆ ಮಾತನಾಡಿ, ‘ಪ್ರತಿ ಮಕ್ಕಳಲ್ಲಿ ವಿಶೇಷ ಜ್ಞಾನಾಸಕ್ತಿ ಇದ್ದು, ಅದನ್ನು ಗುರುತಿಸಿ, ಪ್ರೋತ್ಸಾಹಿಸುವುದು ಅವಶ್ಯಕ’ ಎಂದು ಹೇಳಿದರು.
ಪಿಡಿಒ ಸುಭಾಷ ಹುಬ್ಬಳ್ಳಿ, ರಮೇಶ ಕಾಂಬಳೆ, ಶಿಕ್ಷಕರಾದ ಎ.ಆರ್. ಗೊರನಾಳ, ಎಸ್.ಆರ್. ಗುರ್ಕಿ, ಎಚ್.ಎಸ್. ಹಾಲವಡೆಯರ, ಉಮೇಶ ಕೋಳಿ, ಎ.ಬಿ. ಮದಾಳೆ, ಟಿ.ಆರ್. ಹರಳೆ, ಎಸ್.ಎಸ್. ಕುಂಬಾರ, ಶಿಕ್ಷಕಿಯರಾದ ಬಿ.ಬಿ. ಪತ್ತಿ, ಆರ್.ಜಿ. ಕಾಂಬಳೆ, ಎನ್.ವಿ. ಯಾದವ, ಜೆ.ಎಸ್. ಜಮಖಂಡಿ, ಎ.ಬಿ. ಅರಕೇರಿ, ಜೆ.ಎಂ. ಬುರ್ಕೆ, ವಿ.ಬಿ. ಕೋರೆ, ಕೋಣ್ಣುರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.