ರಾಯಬಾಗ: ಹಳೆ ಪಿಂಚಣಿ ಯೋಜನೆಯನ್ನೆ ಮುಂದುವರಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದವರು ರಾಯಬಾಗ ಶಾಸಕ ಡಿ.ಎಂ. ಐಹೊಳೆ ಅವರಿಗೆ ಮನವಿ ಸಲ್ಲಿಸಿದರು.
‘ಪಿಂಚಣಿ ಎನ್ನುವುದು ನೌಕರರ ಜೀವನದ ಸಂಧ್ಯಾಕಾಲದ ಹಕ್ಕಾಗಿದೆ. ಹೀಗಾಗಿ ಕೂಡಲೇ ನೂತನ ಪಿಂಚಣಿ (ಎನ್‌ಪಿಎಸ್)ಯನ್ನು ರದ್ದುಪಡಿಸಿ ಹಳೆ ಯೋಜನೆಯನ್ನು ಜಾರಿಗೆ ತಂದು, ನೌಕರರ ಅವಲಂಬಿತರ ಹಿತಾಸಕ್ತಿ ಕಾಪಾಡಬೇಕು’ ಎಂದು ಒತ್ತಾಯಿಸಿದರು.
ಅಧ್ಯಕ್ಷ ವಿಶ್ವನಾಥ ಹಾರೂಗೇರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಅರಗೆ, ಪ್ರಧಾನ ಕಾರ್ಯದರ್ಶಿ ಡಿ.ವಿ. ನಾಯಿಕ ಪಾಟೀಲ, ಬಿ.ಎಲ್. ಘಂಟಿ, ಬಿ.ಸಿ. ಯಡವನ್ನವರ, ಎಸ್.ಡಿ. ರಾಯಮಾನೆ, ಎಂ.ಸಿ. ಐಹೊಳೆ, ಸುಲೇಮಾನ ಶೇಖ, ದಿಲೀಪ ಹಾರೂಗೇರಿ, ಬಸನಗೌಡ ಪಾಟೀಲ, ಶ್ರೀಧರ ಚೌಗಲಾ, ಮೋಹನ ರಾಜಮಾನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.