ಚಿಕ್ಕೋಡಿ: ‘ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ. ಅವರ ಸೈನ್ಯದಲ್ಲಿ 60 ಸಾವಿರ ಮುಸ್ಲಿಂ ಸೈನಿಕರಿದ್ದರು. ಹಲವು ಜಾತಿಯ ಜನರನ್ನು ಒಗ್ಗೂಡಿಸಿ ಸ್ವರಾಜ್ಯ ನಿರ್ಮಿಸುವ ಕನಸು ಕಂಡಿದ್ದರು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ತಾಲ್ಲೂಕಿನ ಸದಲಗಾ ಪಟ್ಟಣದ ಶಿವಾಜಿ ವೃತ್ತದಲ್ಲಿ ಸೋಮವಾರ ಅನ್ನಪೂರ್ಣೇಶ್ವರಿ ಫೌಂಡೇಷನ್ ವತಿಯಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
‘ಹಿಂದುಳಿದ ವರ್ಗದ ಜನರಿಗೆ ತಮ್ಮ ಸಂಸ್ಥಾನದಲ್ಲಿ ಮೀಸಲಾತಿ ನೀಡಿದ್ದ ಮರಾಠಾ ಸಮುದಾಯ ಇಂದು ಮೀಸಲಾತಿಗಾಗಿ ಹೋರಾಟ ನಡೆಸಬೇಕಿರುವುದು ವಿಪರ್ಯಾಸ’ ಎಂದರು.
‘ಸಾಲವನ್ನಾದರೂ ಮಾಡಿ, ಒಂದು ಹೊತ್ತು ಉಪವಾಸವಿದ್ದಾದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ಹುಕ್ಕೇರಿ ಮಾತನಾಡಿ, ‘ಸದಲಗಾ ಪಟ್ಟಣದಲ್ಲಿ ₹2 ಕೋಟಿ ಮೊತ್ತದಲ್ಲಿ ಮರಾಠಾ ಸಮಾಜಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ, ಸದಲಗಾವನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.
ಅನ್ನಪೂರ್ಣೇಶ್ವರಿ ಫೌಂಡೇಷನ್‌ನ ಶಾಸಕ ಗಣೇಶ ಹುಕ್ಕೇರಿ ಮಾತನಾಡಿರು. ಮಾಜಿ ಸಚಿವ ವೀರಕುಮಾರ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡರಾದ ಉತ್ತಮ ಪಾಟೀಲ, ರಾಹುಲ ಜಾರಕಿಹೊಳಿ, ಬಾಳಸಾಹೇಬ ಪಾಟೀಲ, ಬಿ.ಆರ್. ಯಾದವ, ಅನಿಲ ಮಾನೆ, ರಾಮಾ ಮಾನೆ, ರಾಜು ಗುಂಡಕಲ್ಲೆ, ರವೀಂದ್ರ ಮಿರ್ಜೆ, ದಾದಾರಾಜೇ ನಿಂಬಾಳಕರ, ಸುಪ್ರಿಯಾ ಪಾಟೀಲ, ಸುಮಿತ್ರಾ ಉಗಳೆ, ನಂದರಾಜೇ ನಿಂಬಾಳಕರ, ಇರ್ಫಾನ್ ಬೇಪಾರಿ, ಮೋಹನ ಶಿತೋಳೆ, ಪ್ರದೀಪ ಜಾಧವ, ಸಂತೋಷ ನವಲೆ, ಸಂತೋಷ ಹವಾಲ್ದಾರ ಇದ್ದರು.
Highlights - ಪ್ರಮುಖ ಬೀದಿಗಳಲ್ಲಿ ಶಿವಾಜಿ ಪ್ರತಿಮೆ ಮೆರವಣಿಗೆ ಪೂರ್ಣಕುಂಭ ಹೊತ್ತು ಸಾಗಿದ ಮಹಿಳೆಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.