ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಕಾರು ಅಪಘಾತ ಕುರಿತು ಜನರಲ್ಲಿ ಕೆಲ ಗೊಂದಲಗಳಿವೆ. ಸಚಿವೆ ಇದಕ್ಕೆ ಸ್ಪಷ್ಟನೆ ನೀಡಬೇಕು. ಇದರ ಬಗ್ಗೆ ತನಿಖೆ ನಡೆಸುವುದು ಮುಖ್ಯಮಂತ್ರಿ ಜವಾಬ್ದಾರಿ’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
‘ಅಂದು ಸಚಿವೆ ಸರ್ಕಾರಿ ಕಾರನ್ನು ಬಳಸಿಲ್ಲ, ಬೆಂಗಾವಲು ಪಡೆ ಪಡೆದಿಲ್ಲ, ಸರ್ಕಾರಿ ಗನ್‌ಮ್ಯಾನ್ ಕೂಡ ಕರೆಸಿಕೊಂಡಿಲ್ಲ. ರಾತೋರಾತ್ರಿ ಸಂಚಾರ ಮಾಡುವಾಗ ಏಕೆ ಎಚ್ಚರಿಕೆ ವಹಿಸಿಲ್ಲ? ಅಪಘಾತದ ನಂತರ ಕಾರನ್ನು ಏಕೆ ಮುಸುಕು ಹಾಕಿ ನಿಲ್ಲಿಸಿದ್ದರು? ಪೊಲೀಸರು ಸ್ಥಳ ಮಹಜರು ಮಾಡುವ ಮುನ್ನವೇ ಸಚಿವರ ಆಪ್ತರೇ ಎತ್ತಿಕೊಂಡು ಹೋಗಿದ್ದು ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಸಚಿವೆಯೇ ಉತ್ತರ ಹೇಳಬೇಕು’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.