ADVERTISEMENT

‘ನೀಟ್’ ಸಾಧನೆ: ಮಹಾಂತೇಶಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 14:44 IST
Last Updated 14 ಜೂನ್ 2019, 14:44 IST
ವಿದ್ಯಾರ್ಥಿ ಮಹಾಂತೇಶ ಅವರನ್ನು ಮುಖಂಡ ದರೇಪ್ಪಾ ಠಕ್ಕಣ್ಣವರ ಶುಕ್ರವಾರ ಸನ್ಮಾನಿಸಿದರು
ವಿದ್ಯಾರ್ಥಿ ಮಹಾಂತೇಶ ಅವರನ್ನು ಮುಖಂಡ ದರೇಪ್ಪಾ ಠಕ್ಕಣ್ಣವರ ಶುಕ್ರವಾರ ಸನ್ಮಾನಿಸಿದರು   

ಅಥಣಿ: ‘ತಾಲ್ಲೂಕಿನ ಬುರ್ಲಿಟ್ಟಿಯ ವಿದ್ಯಾರ್ಥಿ ಮಹಾಂತೇಶ ಸದಾಶಿವ ಖೋತ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ 92ರಷ್ಟು ಅಂಕ ಗಳಿಸಿದ್ದಲ್ಲದೇ, ‘ನೀಟ್‌’ ಪರೀಕ್ಷೆಯಲ್ಲಿ 555 ಅಂಕ ಪಡೆದು 20070ನೇ ರ‍್ಯಾಂಕ್ ಪಡೆದು ಗ್ರಾಮಕ್ಕೆ ಮತ್ತು ಸಮಾಜಕ್ಕೆ ಗೌರವ ತಂದಿದ್ದಾರೆ’ ಎಂದು ಪಂಚಮಸಾಲಿ ಸಮಾಜದ ಮುಖಂಡ ದರೇಪ್ಪ ಠಕ್ಕಣ್ಣವರ ಹೇಳಿದರು.

ಶುಕ್ರವಾರ ಮಹಾಂತೇಶ ಖೋತ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು. ‘ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಮಾಜದವರು ಮುಂದೆ ಬರಬೇಕು’ ಎಂದರು.

ಮುಖಂಡರಾದ ಎ.ಪಾಟೀಲ, ರಾಮನಗೌಡ ಪಾಟೀಲ, ವಿಜಯಕುಮಾರ ನೇಮಗೌಡ, ಪ್ರಕಾಶ ಪಾಟೀಲ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.