
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಹೆಸರುಕಾಳು, ಉದ್ದು ಖರೀದಿಸಲು ಖರೀದಿ ಕೇಂದ್ರದ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ, ಪಟ್ಟಣದಲ್ಲಿ ಸೋಮವಾರ ರೈತರು ಟ್ರ್ಯಾಕ್ಟರ್‌ಗಳ ಸಹಿತ ಬೃಹತ್ ರ್‍ಯಾಲಿ ನಡೆಸಿದರು. ಪ್ರತಿಭಟನಕಾರರು ಉಪ ವಿಭಾಗಾಧಿಕಾರಿ ಕಚೇರಿಗೂ ಮುತ್ತಿಗೆ ಹಾಕಿದರು.
ಡೊಳ್ಳು, ತಮಟೆ ಬಾರಿಸುತ್ತ, ಹಸಿರು ಟವಲ್ ಬೀಸುತ್ತ ಹಲವರು ಪಾದಯಾತ್ರೆ ಮಾಡಿದರು. ತಾಲ್ಲೂಕಿನ ದೊಡವಾಡ, ಗುಡಕಟ್ಟಿ, ನನಗುಂಡಿಕೊಪ್ಪ, ಯಡಳ್ಳಿ, ಕರೀಕಟ್ಟಿ, ಸಂಗ್ರೇಶಕೊಪ್ಪ ಸೇರಿ ವಿವಿಧ ಊರಿನ ಜನರೂ ಪಾಲ್ಗೊಂಡರು.
‘ಈ ಬಾರಿ ಅತಿವೃಷ್ಟಿಯಾಗಿದೆ. ಹೆಸರುಕಾಳು, ಉದ್ದು ಸೇರಿ ಎಲ್ಲ ಧಾನ್ಯಗಳನ್ನು ರಾಶಿ ಮಾಡುವಾಗ ತೇವಾಂಶ ಹೆಚ್ಚಾಗಿದೆ. ಅದನ್ನೇ ನೆಪ ಮಾಡಿ, ಖರೀದಿ ಕೇಂದ್ರದ ಸಿಬ್ಬಂದಿ ಕಾಳು ಖರೀದಿಸುತ್ತಿಲ್ಲ. ರೈತರನ್ನು ಉದ್ದೇಶಪೂರ್ವಕವಾಗಿ ಸಂಕಷ್ಟಕ್ಕೆ ತಳ್ಳಲಾಗಿದೆ’ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.