
ಪ್ರಜಾವಾಣಿ ವಾರ್ತೆ
ಚಿಕ್ಕೋಡಿ: ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ತಂದೆಯೇ ಮಗನ ಕುತ್ತಿಗೆಯನ್ನು ವೈರ್‌ನಿಂದ ಬಿಗಿದು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಿರಣ ಆಲೂರೆ (31) ಎಂಬುವವನನ್ನು ತಂದೆ ನಿಜಗುಣಿ ಆಲೂರೆ ಹಾಗೂ ಈತನ ಸ್ನೇಹಿತ ಉಸ್ಮಾನ್ ಮುಲ್ಲಾ ಸೇರಿಕೊಂಡು ಸೋಮವಾರ ಕೊಲೆ ಮಾಡಿದ್ದು, ಹೃದಯಾಘಾತದಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದರು.
ಕಿರಣ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ ತಾನು ಹಾಗೂ ಸ್ನೇಹಿತ ಉಸ್ಮಾನ್ ಸೇರಿ ಕೊಲೆ ಮಾಡಿದ್ದಾಗಿ ತಂದೆ ನಿಜಗುಣಿ ಒಪ್ಪಿಕೊಂಡಿದ್ದಾನೆ. ಚಿಕ್ಕೋಡಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.