ಕೌಜಲಗಿ: ಇಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಭಾಗವಹಿಸಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ, ಪೊಲೀಸ್, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ 46 ಮಂದಿಯನ್ನು ಶನಿವಾರ ಅರ್ಬನ್ ಬ್ಯಾಂಕ್, ಪಿಕೆಪಿಎಸ್ ಮೊದಲಾದ ಸಹಕಾರಿ ಸಂಘಗಳ ವತಿಯಿಂದ ಸತ್ಕರಿಸಲಾಯಿತು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ‘ಕೊರೊನಾ ಸೋಂಕು ತಡೆಗಟ್ಟುವಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸೇವೆಯು ದೇವರ ಸೇವೆಗೆ ಸಮವಾಗಿದೆ. ರಾಜ್ಯ ಸರ್ಕಾರದ ಆದೇಶದ ಅನ್ವಯ ಆಶಾ ಕಾರ್ಯಕರ್ತರಿಗೆ ಸ್ಥಳೀಯ ಸಹಕಾರಿ ಸಂಘಗಳ ವತಿಯಿಂದ ₹ 3ಸಾವಿರ ಪ್ರೋತ್ಸಾಹಧನ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಿದ್ದೇವೆ. ಸೋಂಕು ನಿಯಂತ್ರಣಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕರಿಸಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಬಡವರಿಗೆ ಮಾಸ್ಕ್ ಹಾಗೂ 3200 ಆಹಾರ ಕಿಟ್‌ಗಳನ್ನು ಗ್ರಾಮಸ್ಥರಿಗೆ ನೀಡಿದ್ದಾರೆ. ಅವರೆಲ್ಲರ ಸೇವೆ ಸ್ಮರಣೀಯವಾದುದು’ ಎಂದರು.
‘ಕೊರೊನಾ ಯೋಧರ ಸೇವೆಯಿಂದಾಗಿ ದೇಶದಲ್ಲಿ ಸೋಂಕನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗಿದೆ’ ಎಂದು ಪ್ರಭಾ ಶುಗರ್ಸ್ ನಿರ್ದೇಶಕ ಎಂ.ಆರ್. ಭೋವಿ ಹೇಳಿದರು.
ಅರ್ಬನ್ ಬ್ಯಾಂಕ್ ನಿರ್ದೇಶಕ ಶಿವಾನಂದ ಲೋಕನ್ನವರ, ಕುಲಗೋಡ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಕೆ. ನೇರಳೆ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಕುಂತಲಾ ಪರುಶೆಟ್ಟಿ, ಶಶಿಕಲಾ ಸಣ್ಣಕ್ಕಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶಾಂತಪ್ಪ ಹಿರೇಮೇತ್ರಿ, ಬೈಲಹೊಂಗಲ ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಎಸ್.ಬಿ. ಬಿರಾದಾರ, ಮುಖಂಡ ಅಶೋಕ ಪರುಶೆಟ್ಟಿ, ಅಡಿವೆಪ್ಪ ದಳವಾಯಿ, ಮಾಲತೇಶ ಸಣ್ಣಕ್ಕಿ, ಎ.ಎಂ. ಮೋಡಿ, ಪಿಡಿಒ ಎಚ್.ಬಿ. ಲಿಂಬೋಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.