ADVERTISEMENT

ಎಸ್‌ಜಿಬಿಐಟಿ: ಕೊರೊನಾ ಯೋಧರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 6:40 IST
Last Updated 20 ನವೆಂಬರ್ 2020, 6:40 IST
ಬೆಳಗಾವಿಯ ಎಸ್‌ಜಿಬಿಐಟಿಯಲ್ಲಿ ಕೊರೊನಾ ಯೋಧರನ್ನು ಸತ್ಕರಿಸಲಾಯಿತು
ಬೆಳಗಾವಿಯ ಎಸ್‌ಜಿಬಿಐಟಿಯಲ್ಲಿ ಕೊರೊನಾ ಯೋಧರನ್ನು ಸತ್ಕರಿಸಲಾಯಿತು   

ಬೆಳಗಾವಿ: ಇಲ್ಲಿನ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನಲ್ಲಿ ಕೋವಿಡ್-19 ಕಾರ್ಯಪಡೆಯ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಘಟಕದಿಂದ ಕೊರೊನಾ ಯೋಧರನ್ನು ಸತ್ಕರಿಸಲಾಯಿತು.

ಕಾಲೇಜಿನಲ್ಲಿ ತರಗತಿಗಳು ಪುನರಾರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ, ಎಲ್ಲ ಕೊಠಡಿಗಳನ್ನೂ ಸ್ಯಾನಿಟೈಸ್ ಮಾಡಲಾಯಿತು. ಎಲ್ಲ ಸಿಬ್ಬಂದಿ ಮತ್ತು ಆಗಮಿಸಿದ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ಆರೋಗ್ಯಾಧಿಕಾರಿ ಡಾ.ಉಮೇಶ ಚರಂತಿಮಠ, ಲ್ಯಾಬ್ ಟೆಕ್ನೀಷಿಯನ್ ದತ್ತ ಸಾಳುಂಕೆ, ಲಿಯಾಖತ್ ಶೇಖ್, ಶಾಂತು ಚಾಂಗಳೆ ಮತ್ತು ಸತೀಶ ಬಡೋಡಕರ ಅವರನ್ನು ಗೌರವಿಸಲಾಯಿತು.

‘ಕೊರೊನಾದಿಂದ ದೂರವಿರಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಉಮೇಶ ಚರಂತಿಮಠ ಸಲಹೆ ನೀಡಿದರು.

ADVERTISEMENT

ಪ್ರಾಚಾರ್ಯ ಡಾ.ಸಿದರಾಮಪ್ಪ ವಿ. ಇಟ್ಟಿ, ‘ಕೋವಿಡ್ ದೃಢಪಟ್ಟರೂ ಎದೆಗುಂದದೆ ವೈದ್ಯಾಧಿಕಾರಿಗಳ ಸಲಹೆಯಂತೆ ಅಗತ್ಯ ಕ್ರಮ ಕೈಕೊಂಡರೆ ಹೋಗಲಾಡಿಸಬಹುದಾಗಿದೆ’ ಎಂದರು.

ಕಾಲೇಜಿನ ಅಧ್ಯಕ್ಷ ಡಾ.ಎಫ್.ವಿ. ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಆರ್.ಎಂ. ಗಲಗಲಿ ಸ್ವಾಗತಿಸಿದರು. ಪ್ರೊ.ಶ್ರೀಲಕ್ಷ್ಮಿ ಆಗ್ಲಿಗೆದಿ ನಿರೂಪಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಪ್ರೊ.ಚೈತಶ್ರೀ ಕುರ್ತಕೋವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.