ADVERTISEMENT

‘ತಪ್ಪೇನಿದೆ’ ಚಲನಚಿತ್ರಕ್ಕೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 14:18 IST
Last Updated 2 ಸೆಪ್ಟೆಂಬರ್ 2021, 14:18 IST
ಬೆಳಗಾವಿಯಲ್ಲಿ ‘ಲೀ’ ಪ್ರೊಡಕ್ಷನ್ಸ್‌ನವರು ನಿರ್ಮಿಸುತ್ತಿರುವ ‘ತಪ್ಪೇನಿದೆ’ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಗುರುವಾರ ನೆರವೇರಿತು
ಬೆಳಗಾವಿಯಲ್ಲಿ ‘ಲೀ’ ಪ್ರೊಡಕ್ಷನ್ಸ್‌ನವರು ನಿರ್ಮಿಸುತ್ತಿರುವ ‘ತಪ್ಪೇನಿದೆ’ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಗುರುವಾರ ನೆರವೇರಿತು   

ಬೆಳಗಾವಿ: ‘ಲೀ’ ಪ್ರೊಡಕ್ಷನ್ಸ್‌ನವರು ನಿರ್ಮಿಸುತ್ತಿರುವ ‘ತಪ್ಪೇನಿದೆ’ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಗುರುವಾರ ನೆರವೇರಿತು.

ಚಿತ್ರೀಕರಣಕ್ಕೆ ನಿರ್ಮಾಪಕ ಮುರುಗೇಶ್ ಶಿವಪೂಜಿ ಮತ್ತು ಬಿಲ್ಡರ್‌ ಆರ್.ಎಂ. ಚೌಗಲೆ ಚಾಲನೆ ನೀಡಿದರು.

ಫಿಟ್ಟರ್ ಸುವರ್ಣ ಅವರು ನಿರ್ದೇಶಿಸುತ್ತಿರುವ ನಾಯಕಿ ಪ್ರಧಾನವಾದ ಚಿತ್ರದಲ್ಲಿ ನಾಯಕಿಯಾಗಿ ಮಂಗಳೂರಿನ ಸಲೋಮಿ ಡಿಸೋಜಾ ನಟಿಸುತ್ತಿದ್ದಾರೆ. ಪಿಎಸ್‌ಐ ಪಾತ್ರದಲ್ಲಿ ರಾಜ್‌ಕುಮಾರ್ ನಾಯ್ಕ್ ನಟಿಸುತ್ತಿದ್ದು, ರಾಜ್ ಎಂ., ಬಸವರಾಜ ವಿ.ಐ., ಬಿ.ಸಿ. ಸಂದೀಪ,ಈಶ್ವರಿ ಮತ್ತು ಮಾರುತಿ ಅಭಿನಯಿಸುತ್ತಿದ್ದಾರೆ. ಇವರೂ ನಿರ್ದೇಶನದ ತಂಡದಲ್ಲಿದ್ದಾರೆ. ಎ.ಆರ್. ಕೃಷ್ಣ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಚಿತ್ರೀಕರಣ ಸುತ್ತಮುತ್ತಲಿನಲ್ಲಿ ಪ್ರದೇಶಗಳಲ್ಲಿ ನಡೆಯುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.