ADVERTISEMENT

ಬೆಳಗಾವಿ | ಫೈನಾನ್ಸ್ ಕಿರುಕುಳ: ವಿಷ ಸೇವಿಸಿ ಅಳಗವಾಡಿ ಗ್ರಾಮದ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 19:19 IST
Last Updated 3 ಫೆಬ್ರುವರಿ 2025, 19:19 IST
<div class="paragraphs"><p>ಶಿವನಪ್ಪ ಧರ್ಮಟ್ಟಿ</p></div>

ಶಿವನಪ್ಪ ಧರ್ಮಟ್ಟಿ

   

ಬೆಳಗಾವಿ : ಮೈಕ್ರೊ ಫೈನಾನ್ಸ್ ಕಿರುಕುಳ ತಾಳಲಾರದೇ ವಿಷ ಸೇವಿಸಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ರಾಯಬಾಗ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಅಳಗವಾಡಿಯ ಶಿವನಪ್ಪ ಧರ್ಮಟ್ಟಿ (66) ಆತ್ಮಹತ್ಯೆಗೆ ಶರಣಾದವರು.‌

ADVERTISEMENT

ತಮ್ಮ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ವಿವಿಧ ಫೈನಾನ್ಸ್ ಕಂಪನಿಯಲ್ಲಿ ₹10 ಲಕ್ಷ ಸಾಲ ಮಾಡಿಕೊಂಡಿದ್ದರು. ಆದರೆ, ಆಸ್ಪತ್ರೆ ಖರ್ಚಿಗೆ ಹಣ ಹೊಂದಿಸುವುದರಲ್ಲೇ ಬೇಸರಗೊಂಡ ಶಿವನಪ್ಪ ಅವರು ಸಾಲದ ಕಂತು ಪಾವತಿಸಿರಲಿಲ್ಲ.‌

ಹೀಗಾಗಿ, ಸಾಲ‌ ಮರುಪಾವತಿಸುವಂತೆ ಮೈಕ್ರೊ ಫೈನಾನ್ಸ್ ಕಂಪನಿಯವರು ಆಗಾಗ ಪೋನ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಖಾಸಗಿ ಫೈನಾನ್ಸ್ ಕಂಪನಿ ವಿರುದ್ಧ ಸಂಬಂಧಿಕರು ಆರೋಪಿಸಿದ್ದಾರೆ.

ಈ ಬಗ್ಗೆ ಹಾರೂಗೇರಿ‌ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.