
ಪ್ರಜಾವಾಣಿ ವಾರ್ತೆಬಂಧನ
(ಪ್ರಾತಿನಿಧಿಕ ಚಿತ್ರ)
ಬೆಳಗಾವಿ: ನಗರದ ವಿವಿಧೆಡೆ ಬುಧವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಾಜಿ ರಸ್ತೆ ನಾಲೆ ಬಳಿ ತಹಶೀಲ್ದಾರ್ ಗಲ್ಲಿಯ ವಿನಾಯಕ ಸಾಂಬ್ರೇಕರ(39) ಎಂಬಾತನನ್ನು ಖಡೇ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹1,020 ನಗದು ವಶಕ್ಕೆ ಪಡೆಯಲಾಗಿದೆ.
ವಡಗಾವಿಯ ಮಲಪ್ರಭಾ ನಗರದಲ್ಲಿ ಅದೇ ಪ್ರದೇಶದ ಮಲ್ಲಿಕಾರ್ಜುನ ಕಾಂಬಳೆ ಎಂಬಾತನನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿ, ₹1,250 ನಗದು ವಶಕ್ಕೆ ಪಡೆದಿದ್ದಾರೆ.
ಹಳೇ ಸಗಟು ತರಕಾರಿ ಮಾರುಕಟ್ಟೆ ಬಳಿ ಕಾಕತಿಯ ಆಸಿಫ್ ಶೇಖ್, ಆರೀಫ್ ಷಾಪುರಿ, ಖಾಸಬಾಗದ ಟೀಚರ್ಸ್ ಕಾಲೊನಿಯ ಸುನೀಲ ಜಾಧವ ಎಂಬುವವರನ್ನು
ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ₹1,790 ನಗದು ವಶಕ್ಕೆ ಪಡೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.