ADVERTISEMENT

ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು: ಶ್ರೀಕಾಂತ ಕದಂ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 12:44 IST
Last Updated 1 ಆಗಸ್ಟ್ 2021, 12:44 IST
ಮುಗಳಖೋಡ ಪತ್ರಿಕಾ ಬಳಗದಿಂದ ಖೇಮಲಾಪುರದ ಕಾಳಜಿ ಕೇಂದ್ರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು
ಮುಗಳಖೋಡ ಪತ್ರಿಕಾ ಬಳಗದಿಂದ ಖೇಮಲಾಪುರದ ಕಾಳಜಿ ಕೇಂದ್ರದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು   

ಮುಗಳಖೋಡ (ಬೆಳಗಾವಿ ಜಿಲ್ಲೆ): ಪಟ್ಟಣದ ಪತ್ರಿಕಾ ಬಳಗದಿಂದ ರಾಯಬಾಗ ತಾಲ್ಲೂಕಿನ ಖೇಮಲಾಪೂರ ಗ್ರಾಮದ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರೊಂದಿಗೆ ಸಂವಾದ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

90 ಮಕ್ಕಳು ಹಾಗೂ 640 ಮಂದಿ ಇರುವ ಈ ಕೇಂದ್ರದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಚೌಗಲಾ ಹಾಗೂ ಸದಸ್ಯರು ಊಟ, ಜಾನುವಾರುಗೆಮೇವು ವ್ಯವಸ್ಥೆ ಮಾಡಿದರು.

ಈ ವೇಳೆ ಮಾತನಾಡಿದ ಸುಜಾತಾ, ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುತ್ತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಪತ್ರಿಕಾರಂಗ. ತಮ್ಮ ವರಿದಿಯೊಂದಿಗೆ ನೆರೆ ಸಂತ್ರಸ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿರುವ ಮುಗಳಖೋಡ ಪತ್ರಿಕಾ ಬಳಗದವರ ಈ ಹೊಸ ಹೆಜ್ಜೆ ಶ್ಲಾಘನೀಯ’ ಎಂದರು.

ADVERTISEMENT

ಗ್ರಾ.ಪಂ. ಸದಸ್ಯ ಶ್ರೀಕಾಂತ ಕದಂ, ‘ಸಂತ್ರಸ್ತರಿಗೆ ಶಾಶ್ವತ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕವಡೆ ಕಾಸಿನ ಪರಿಹಾರದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ನೆರವು ನೀಡಿದ ಡಾ.ಸಿ.ಬಿ. ಕುಲಿಗೋಡ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ರಮೇಶ ಯಡವಣ್ಣವರ ಹಾಗೂ ಶಿವಪ್ಪ ಹಳ್ಳೂರ ಅವರನ್ನು ಅಭಿನಂದಿಸಲಾಯಿತು.

ಪತ್ರಿಕಾ ಬಳಗದಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ಮತ್ತು ಬಿಸ್ಕೆಟ್‌ಗಳನ್ನು ವಿತರಿಸಲಾಯಿತು.

ಪತ್ರಕರ್ತರಾದ ಚಿದಾನಂದ ಐಹೊಳೆ, ಸಂಗಮೇಶ ಹಿರೇಮಠ, ಅಜಯ ತೇರದಾಳ, ಸಂತೋಷ ಮುಗಳಿ, ಬಾಳು ಕೋಟಿನತೋಟ, ಗ್ರಾ.ಪಂ. ಉಪಾಧ್ಯಕ್ಷ ಸತ್ಯಪ್ಪ ಖವಟಗೊಪ್ಪ, ಸದಸ್ಯರಾದ ಶ್ರೀಕಾಂತ ಕದಂ, ಮೃತ್ಯುಂಜಯ ಮಠಪತಿ, ಮಹಾಂತೇಶ ಧೂಪದಾಳ, ಸದಾ ವಡಗಿ, ಮಹಾದೇವ ಮಗದುಮ್, ಕುಮಾರ ಕಾಂಬಳೆ, ಸೌರಭ ಚೌಗಲಾ, ಪುಟ್ಟಮ್ಮ ಗಸ್ತಿ, ಕುಡಚಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಮುಖ್ಯಶಿಕ್ಷಕ ಆರ್.ಡಿ. ಕೆಳಗಡೆ, ಶಿಕ್ಷಕ ಕುಶಾಲ ಹಳಕ ಇದ್ದರು.

ಪಿಡಿಒ ನಿಂಗಣ್ಣ ಬೀರನಗಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.