ADVERTISEMENT

ರಾಮದುರ್ಗ|‘ಜನಪದ ಸಾಹಿತ್ಯ ಜನರ ಜೀವನಾಡಿ’: ಶ್ರೀಕಾಂತ ಕೆಂದೂಳಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:23 IST
Last Updated 12 ಮೇ 2025, 13:23 IST
ರಾಮದುರ್ಗದ ಸಿ.ಎಸ್‌. ಬೆಂಬಳಗಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪದ ಕಲಾ ಸಂಭ್ರಮವನ್ನು ವಿದ್ಯಾ ಪ್ರಸಾರಕ ಸಮಿತಿಯ ಕಾರ್ಯದರ್ಶಿ ಪಿ.ಎಂ. ಜಗತಾಪ ಉದ್ಘಾಟಿಸಿದರು
ರಾಮದುರ್ಗದ ಸಿ.ಎಸ್‌. ಬೆಂಬಳಗಿ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪದ ಕಲಾ ಸಂಭ್ರಮವನ್ನು ವಿದ್ಯಾ ಪ್ರಸಾರಕ ಸಮಿತಿಯ ಕಾರ್ಯದರ್ಶಿ ಪಿ.ಎಂ. ಜಗತಾಪ ಉದ್ಘಾಟಿಸಿದರು   

ರಾಮದುರ್ಗ: ಜನಪದ ಸಾಹಿತ್ಯ ಮತ್ತು ಸಂಸ್ಕೃತಿಗಳು ಜನಜೀವನದ ಜೀವನಾಡಿಯಾಗಿವೆ. ಅವುಗಳು ಜೀವವಾಹಿನಿಯಾಗಿ ಮನುಕುಲದ ಮೇಲೆ ಪ್ರಭಾವವನ್ನು ಬೀರುತ್ತ ಬಂದಿವೆ ಎಂದು ರಬಕವಿಯ ಜನಪದ ಸಾಹಿತಿ ಹಾಗೂ ಗಾಯಕ ಶ್ರೀಕಾಂತ ಕೆಂದೂಳಿ ಹೇಳಿದರು.

ಇಲ್ಲಿನ ಸಿ.ಎಸ್.ಬೆಂಬಳಗಿ ಕಾಲೇಜಿನಲ್ಲಿ ಪಿ.ಎಂ.ಜಗತಾಪ ದತ್ತಿನಿಧಿ ಮತ್ತು ಕರ್ನಾಟಕ ಸಂಘ, ಕನ್ನಡ ವಿಭಾಗದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಪದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಪಿ.ಎಂ.ಜಗತಾಪ ಉದ್ಘಾಟಿಸಿ ಮಾತನಾಡಿ, ಜನಪದ ಸಾಹಿತ್ಯ ಮತ್ತು ಕಲೆಗಳು ಕನ್ನಡ ನಾಡಿನ ಸಂಸ್ಕೃತಿಯ ಪ್ರತಿಕಗಳಾಗಿವೆ. ಅವುಗಳು ಇಂದಿಗೂ ಜನಸಮುದಾಯಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಎಸ್.ಎಸ್.ಸುಲ್ತಾನಪೂರ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಜನಪದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಸಾಲಹಳ್ಳಿಯ ಜನಪದ ಕಲಾವಿದೆ ಲಕ್ಷ್ಮೀಬಾಯಿ ನೀಲಪ್ಪನವರ ಹಾಗೂ ಅವರ ತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾ ಪ್ರಸಾರಕ ಸಮಿತಿಯ ಸದಸ್ಯ ವೈ.ಬಿ.ಕುಲಗೋಡ, ಟಿ.ದಾಮೋದರ ಹಾಜರಿದ್ದರು.

ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಜನಪದ ಕಲಾಪ್ರದರ್ಶನಗಳು ಜರುಗಿದವು.

ಪ್ರಾಚಾರ್ಯ ಪಿ.ಬಿ.ತೆಗ್ಗಿಹಳ್ಳಿ ಸ್ವಾಗತಿಸಿದರು. ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಎಚ್.ಪಿ.ಹಾಲೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಮಖಾನಾ ಉಪಾಧ್ಯಕ್ಷ ಎಸ್.ಐ. ಮಳಗಲಿ ವಂದಿಸಿದರು. ಮಂಜುಳಾ ಮೂಡ್ಲವರ ಹಾಗೂ ಸರೋಜಾ ಆಲಗುಂಡಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.