ADVERTISEMENT

200 ಮಕ್ಕಳಿಗೆ ಉಚಿತ ಪ್ರವೇಶ: ಮಿಲಿಂದ್ ಭಾತ್ಕಂಡೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:44 IST
Last Updated 30 ಏಪ್ರಿಲ್ 2021, 15:44 IST

ಬೆಳಗಾವಿ: ‘ನಗರದ ಗಜಾನನರಾವ್ ಭಾತ್ಕಂಡೆ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಕೇಂಬ್ರಿಜ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 2021–22ನೇ ಶೈಕ್ಷಣಿಕ ವರ್ಷಕ್ಕೆ 200 ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು’ ಎಂದು ಅಧ್ಯಕ್ಷ ಮಿಲಿಂದ್ ಭಾತ್ಕಂಡೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಕೊರೊನಾದಿಂದಾಗಿ ಅನೇಕ ಪೋಷಕರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಅಂಥವರಿಗೆ ನೆರವಾಗಲು ಉಚಿತ ಪ್ರವೇಶ ಕೊಡಲು ನಿರ್ಧರಿಸಲಾಗಿದೆ. ಪೋಷಕರು ಪ್ರವೇಶ ಖಚಿತಪಡಿಸಬೇಕು. ಹಲವು ವರ್ಷಗಳಿಂದ ಎಲ್ಲ ಸಮುದಾಯದ ಬಡ ಮತ್ತು ವಿಧವೆಯರ 10 ಮಕ್ಕಳಿಗೆ ಪ್ರತಿ ವರ್ಷ ಶಾಲೆಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಈ ಬಾರಿ ಕೊರೊನಾ ಬಿಕ್ಕಟ್ಟಿನಿಂದಾಗಿ 200 ಮಕ್ಕಳಿಗೆ ವಿಸ್ತರಿಸಲಾಗಿದೆ’ ಎಂದಿದ್ದಾರೆ.

‘ಎಸ್‌ಪಿಎಂ ರಸ್ತೆಯಲ್ಲಿರುವ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ 110 ಮತ್ತು ಖಾಸಬಾಗ್‌ನ ಶಿಕ್ಷಕರ ಕಾಲೊನಿಯಲ್ಲಿರುವ ಕೇಂಬ್ರಿಜ್‌ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿಗೆ ತಲಾ 30 ಮಕ್ಕಳಿಗೆ ಉಚಿತವಾಗಿ ಪ್ರವೇಶ ಇದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ: 8884017645 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.