ADVERTISEMENT

‘140 ಮನೆಗಳಿಗೆ ಉಚಿತ ವಿದ್ಯುತ್‌’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 13:06 IST
Last Updated 18 ಆಗಸ್ಟ್ 2019, 13:06 IST
ಬೆಳಗಾವಿಯ ರುಕ್ಮಿಣಿನಗರದಲ್ಲಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಯೋಜನೆಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು
ಬೆಳಗಾವಿಯ ರುಕ್ಮಿಣಿನಗರದಲ್ಲಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಒದಗಿಸುವ ಯೋಜನೆಗೆ ಶಾಸಕ ಅನಿಲ ಬೆನಕೆ ಚಾಲನೆ ನೀಡಿದರು   

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೊಳಿಸಿರುವ ಹಲವು ಮಹತ್ತರ ಯೋಜನೆಗಳಲ್ಲಿ ‘ಪ್ರಧಾನ ಮಂತ್ರಿ ಸಹಜ ಬಿಜಲಿಹರ್‌ ಘರ್‌’ (ಸೌಭಾಗ್ಯ) ಪ್ರಮುಖವಾಗಿದೆ. ಇದರಲ್ಲಿ ನನ್ನ ಉತ್ತರ ಮತಕ್ಷೇತ್ರದ 140 ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ’ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.

ಯೋಜನೆಯಲ್ಲಿ ಇಲ್ಲಿನ ರುಕ್ಮಿಣಿ ನಗರದಲ್ಲಿ ಕಲ್ಪಿಸಿರುವ ವಿದ್ಯುತ್‌ ಸೌಲಭ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇದುವರೆಗೂ ಯಾವ ಕುಟುಂಬವು ವಿದ್ಯುತ್‌ ಸೌಲಭ್ಯ ಹೊಂದಿಲ್ಲವೋ ಅಂಥವರಿಗೆ ಯೋಜನೆಯಿಂದ ಅನುಕೂಲವಾಗಲಿದೆ. ಅನೇಕ ಗುಡ್ಡ ಗಾಡು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಹೊಂದಿಲ್ಲದ ಎಷ್ಟೋ ಮನೆಗಳಿಗೆ ಪ್ರಧಾನಿಯಿಂದಾಗಿ ಬೆಳಕು ದೊರೆತಿದೆ’ ಎಂದರು.

ADVERTISEMENT

ಹೆಸ್ಕಾಂ ಎಇಇ ಅಶ್ವಿನ್ ಶಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.