ADVERTISEMENT

ಜೂಜಾಟ: 18 ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 6:33 IST
Last Updated 13 ಜೂನ್ 2021, 6:33 IST
ಬೆಳಗಾವಿಯ ಖಂಜರ್‌ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ
ಬೆಳಗಾವಿಯ ಖಂಜರ್‌ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ   

ಬೆಳಗಾವಿ: ಇಲ್ಲಿನ ಖಂಜರ್‌ ಗಲ್ಲಿಯಲ್ಲಿ ಶನಿವಾರ ಮಧ್ಯರಾತ್ರಿ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅದೇ ಗಲ್ಲಿಯ ಜುಬೇರ ಸುಬೇದಾರ, ಆರೀಫ ಖೊತ್ವಾಲ್, ಅಯಾಜ್ ಖತೀಬ, ಅಬ್ದುಲ್ ಸಲಾಮ್ ಬಾಳೇಕುಂದ್ರಿ, ಸೊಹೆಲ್ ಮುಲ್ಲಾ, ಷರೀಪ ಮುಲ್ಲಾ, ಅಬುತಾಲಿಪ್ ಶೇಕ್‌, ಆಸೀಫ್‌ ಸೈಯದ್, ಆಯೂಬಖಾನ ಪಠಾಣ, ವಾಸಿಂ ಸೌದಾಗರ, ಇಮ್ರಾನ ಪಟೇಲ, ವಾಸಿಂ ಅಲವಾಡಕರ, ಮುಸ್ತಾಕ ತಹಶೀಲ್ದಾರ, ಇಕ್ಬಾಲ ನರೇಗಲ್‌, ಫಿರೋಜ ಪಠಾಣ, ರಫೀಕ ತಹಶೀಲ್ದಾರ, ಸಲೀಂ ಖತೀಬ ಹಾಗೂ ಸಾಹ ಪಠಾಣ ಬಂಧಿತರು. ಅವರಿಂದ ₹ 1.13 ಲಕ್ಷ, 18 ಮೊಬೈಲ್‌ ಫೋನ್‌, ಒಂದು ದ್ವಿಚಕ್ರವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.