ADVERTISEMENT

ಸಂಭ್ರಮದ ಗಣೇಶ ಚತುರ್ಥಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 13:51 IST
Last Updated 11 ಸೆಪ್ಟೆಂಬರ್ 2021, 13:51 IST
ಉಗರಗೋಳ ಗ್ರಾಮದಲ್ಲಿ ಪಾಟೀಲ ಕುಟುಂಬದವರು ಗಣೇಶ ಮೂರ್ತಿಯನ್ನು ತಂದರು
ಉಗರಗೋಳ ಗ್ರಾಮದಲ್ಲಿ ಪಾಟೀಲ ಕುಟುಂಬದವರು ಗಣೇಶ ಮೂರ್ತಿಯನ್ನು ತಂದರು   

ಉಗರಗೋಳ (ಸವದತ್ತಿ ತಾ.): ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಸರಳವಾಗಿ ಗಣೇಶ ಚತುರ್ಥಿ ಆಚರಿಸಲಾಯಿತು.

ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿದ ಸಿಬ್ಬಂದಿ ವಿಶೇಷ ಪೂಜೆ ಸಲ್ಲಿಸಿದರು. ಸಕಲ ಜೀವರಾಶಿ ಒಳಿತಿಗೆ ಪ್ರಾರ್ಥಿಸಿದರು. ಯಲ್ಲಮ್ಮ ದೇವಸ್ಥಾನದ ಅರ್ಚಕ ನಿಂಗನಗೌಡ ಸಾವಕ್ಕನವರ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ನಾಗರತ್ನಾ ಚೋಳಿನ್, ಆರ್.ಎಚ್. ಸವದತ್ತಿ, ಸದಾನಂದ ಈಟಿ, ಅನಿಲ್ ಗುಡಿಮನಿ, ಎಚ್.ಸಿ. ಸಿದ್ದಸಮುದ್ರ, ಎಸ್.ಎಸ್. ಪಾಟೀಲ, ಬಸು ಸಂಕಣ್ಣವರ ಇದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡು ಉಗರಗೋಳ ಗ್ರಾಮದಲ್ಲಿ ಗಣೇಶ ಚತುರ್ಥಿಯನ್ನು ಶುಕ್ರವಾರ ಆಚರಿಸಲಾಯಿತು. ಜನರು ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದರು. ಗ್ರಾಮದ ದೇವಸ್ಥಾನಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ರಮೇಶ ಪಾಟೀಲ, ಮಲ್ಲನಗೌಡ ಪಾಟೀಲ, ದಿಲಾವರ ಕಿಲಿಕೈ, ರಾಜು ಪಾಟೀಲ, ಶೇಖನಗೌಡ ಪಾಟೀಲ, ರಾಯನಗೌಡ ಪಾಟೀಲ, ಭರಮಪ್ಪ ಗೋರಾಬಾಳ, ಶಂಕರಗೌಡ ಕಾಳಿಂಗೌಡ್ರ, ಪರಸನಗೌಡ ಕಾಳಿಂಗೌಡ್ರ, ಮಂಜುನಾಥಗೌಡ ಚನ್ನಪ್ಪಗೌಡ್ರ, ಮಾರುತಿ ರಾವಳ, ಇಮಾಮಹುಸೇನ್ ಗೂಡುನವರ, ಸುಮಂತ್ ದಂಡಾಪುರ, ಮಂಜು ಸಂಗಟಿ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.