ADVERTISEMENT

ಕುಂದಾನಗರಿಯಲ್ಲಿ ಗಣೇಶೋತ್ಸವ ಸಂಭ್ರಮ

ಆಕರ್ಷಿಸುತ್ತಿರುವ ವೈವಿಧ್ಯ ಗಣೇಶ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 13:52 IST
Last Updated 3 ಸೆಪ್ಟೆಂಬರ್ 2019, 13:52 IST
ಬೆಳಗಾವಿಯ ಎಸ್‌ಪಿಎಂ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಪೈಲ್ವಾನ್‌ ಹಾಗೂ ಫಿಟ್‌ನೆಸ್‌ ಮಹತ್ವ ಸಾರುವ ಗಣೇಶ ಮೂರ್ತಿ ಗಮನಸೆಳೆಯುತ್ತಿದೆಪ್ರಜಾವಾಣಿ ಚಿತ್ರ
ಬೆಳಗಾವಿಯ ಎಸ್‌ಪಿಎಂ ರಸ್ತೆಯಲ್ಲಿ ಪ್ರತಿಷ್ಠಾಪಿಸಿರುವ ಪೈಲ್ವಾನ್‌ ಹಾಗೂ ಫಿಟ್‌ನೆಸ್‌ ಮಹತ್ವ ಸಾರುವ ಗಣೇಶ ಮೂರ್ತಿ ಗಮನಸೆಳೆಯುತ್ತಿದೆಪ್ರಜಾವಾಣಿ ಚಿತ್ರ   

ಬೆಳಗಾವಿ: ನಗರದಲ್ಲಿ ಬಹುತೇಕ ಜನರು ಗಣೇಶ ಚತುರ್ಥಿ ಹಬ್ಬವನ್ನು ಸೋಮವಾರ ಸಡಗರ– ಸಂಭ್ರಮದಿಂದ ಆಚರಿಸಿದರು.

ಇಲ್ಲಿನ 370ಕ್ಕೂ ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಭಿನ್ನತೆ ಹಾಗೂ ವೈವಿಧ್ಯದಿಂದಾಗಿ ಒಂದಕ್ಕಿಂತ ಮತ್ತೊಂದು ಮೂರ್ತಿಗಳು ಜನರ ಗಮನಸೆಳೆಯುತ್ತಿವೆ.

ಗಣೇಶ ಮಹಾಮಂಡಳವರು ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸುವುದು ಸಾಮಾನ್ಯವಾಗಿತ್ತು. ಸೋಮವಾರ ರಾತ್ರಿ ವೇಳೆಗೆ ಬಹುತೇಕ ಮಂಟಪಗಳಲ್ಲಿ ವಿನಾಯಕನ ಆಗಮನವಾಗಿತ್ತು. ಮಹಾಪೂಜೆಯೂ ನೆರವೇರಿತು.

ADVERTISEMENT

ಇನ್ನು, ಮನೆಗಳಲ್ಲಿ ಪ್ರತಿಷ್ಠಾಪಿಸುವವರು ಕುಟುಂಬ ಸಮೇತ ಮಾರುಕಟ್ಟೆಗೆ ಹೋಗಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದರು. ಕೆಲವರು ವಾಹನಗಳಲ್ಲಿ ತಂದರೆ, ಕೆಲವರು ಪಾದಯಾತ್ರೆಯಲ್ಲಿಯೇ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋದರು. ಪ್ರತಿಷ್ಠಾಪನೆ ಅಂಗವಾಗಿ ಪಟಾಕಿಗಳನ್ನು ಸುಡುವುದು ಇಲ್ಲಿನ ವಾಡಿಕೆ. ನಗರದಾದ್ಯಂತ ಸೋಮವಾರ ಇಡೀ ದಿನ ಪಟಾಕಿಗಳ ಅಬ್ಬರ ಜೋರಾಗಿಯೇ ಇತ್ತು. ಮಂಗಳವಾರವೂ ಪಟಾಕಿಗಳನ್ನು ಸುಡುವುದು ಅಲ್ಲಲ್ಲಿ ಕಂಡುಬಂತು.

ಮಂಟಪಗಳನ್ನು ವಿದ್ಯುತ್‌ ದೀಪಾಲಂಕಾರದಿಂದ ಅಲಂಕರಿಸಿರುವುದು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಇಲ್ಲಿನ ಮಂಡಳದವರು 3, 5, 7 ಅಥವಾ 11 ದಿನಗಳಿಗೆ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡುತ್ತಾರೆ. ಮುಂಜಾಗ್ರಗಾ ಕ್ರಮವಾಗಿ ಮಂಟಪಗಳ ಬಳಿ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ.

ಮನೆಗಳಲ್ಲಿ ಮಹಿಳೆಯರು ಗಂಗೆ, ಗೌರಿಯೊಂದಿಗೆ ಗಣೇಶನನ್ನು ಆರಾಧಿಸಿದರು. ತಮ್ಮ ಗಲ್ಲಿಯ ಮುತ್ತೈದೆಯರಿಗೆ ಪರಸ್ಪರ ಅರಿಸಿನ, ಕುಂಕುಮ, ಬಾಗಿನ ನೀಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.