ಬೆಳಗಾವಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಗುರುವಾರ ಬಂಧಿಸಿರುವಇಲ್ಲಿನ ಸಿಸಿಐಬಿ ಪೊಲೀಸರು, ಅವರಿಂದ ₹ 11,050 ಮೌಲ್ಯದ 1 ಕೆ.ಜಿ. 150 ಗ್ರಾಂ. ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ನಡಕಿನ ಓಣಿಯ ಸಿದ್ದಪ್ಪ ಕುರುಬರ, ಸೋಮನಾಥ ಮಾದನಶೆಟ್ಟಿ, ಸಾಂಬ್ರಾ ಲಕ್ಷ್ಮಿ ಗಲ್ಲಿಯ ಸಾಗರ ನಾಯಿಕ ಹಾಗೂ ಪಂತ ಬಾಳೇಕುಂದ್ರಿ ಪಂತ ನಗರದ ವಿನಾಯಕ ಬಸಪ್ಪ ಸೋಮನ್ನವರ ಬಂಧಿತರು. ಅವರು ಬೆಳಗಾವಿ-ಬಾಗಲಕೋಟೆ ರಸ್ತೆಯ ಸಿಂಧೊಳ್ಳಿ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಟೆಕ್ಟರ್ ಸಂಜೀವ ಎಂ. ಕಾಂಬಳೆ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.