ADVERTISEMENT

ಬೆಳಗಾವಿ | ಹೆಣ್ಣುಮಗು ಬಿಟ್ಟು ಹೋದ ಪಾಲಕರು: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 2:58 IST
Last Updated 2 ಆಗಸ್ಟ್ 2025, 2:58 IST
   

ಬೆಳಗಾವಿ: ತಾಲ್ಲೂಕಿನ ಮೋದಗಾ ಗ್ರಾಮದ ಆಸ್ಪತ್ರೆಯಲ್ಲಿ ಮೂರು ವರ್ಷದ ಹೆಣ್ಣುಮಗುವನ್ನು ಉದ್ದೇಶ ಪೂರ್ವಕವಾಗಿ ಬಿಟ್ಟುಹೋದ ಆರೋಪದಡಿ, ಮಾರಿಹಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಡಿಯಲ್‌ ಗ್ರೇಷಿಯಸ್‌ ಆಸ್ಪತ್ರೆಯಲ್ಲಿ ಮೇ 15ರಂದು ಮೂರು ವರ್ಷದ ಹೆಣ್ಣುಮಗುವನ್ನು ಹೆತ್ತವರೇ ಬಿಟ್ಟುಹೋಗಿದ್ದಾರೆ. ಮಗುವಿಗೆ ಸರಿಯಗಿ ತಿಳಿಯದ ಕಾರಣ ಮಕ್ಕಳ ರಕ್ಷಣಾ ಘಟಕದವರು ದತ್ತು ಸ್ವೀಕಾರ ಕೇಂದ್ರಕ್ಕೆ ಸೇರಿಸಿದ್ದರು. ಇದೂವರೆಗೆ ಮಗುವಿನ ಪಾಲಕರು ಪತ್ತೆಯಾಗಿಲ್ಲ. ಹೀಗಾಗಿ, ಮಗುವನ್ನು ಬಿಟ್ಟುಹೋದ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT