ADVERTISEMENT

ಜಿಐಟಿ: ‘ಟೆಕ್ನೋ ಸ್ಪಾರ್ಕ್’ ಮೇಳ ಸಂಪನ್ನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 12:27 IST
Last Updated 12 ಏಪ್ರಿಲ್ 2019, 12:27 IST
ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ ‘ಟೆಕ್ನೋ ಸ್ಪಾರ್ಕ್-2019’ ತಾಂತ್ರಿಕ ಮೇಳವನ್ನು ಇನ್ಫೋಸಿಸ್‌ ಕಂಪನಿ ಪುಣೆ ವಿಭಾಗದ ಹಿರಿಯ ವ್ಯವಸ್ಥಾಪಕಿ ಹೇಮಾವತಿ ಕೋರಾಳಿ ಉದ್ಘಾಟಿಸಿದರು
ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನಲ್ಲಿ ನಡೆದ ‘ಟೆಕ್ನೋ ಸ್ಪಾರ್ಕ್-2019’ ತಾಂತ್ರಿಕ ಮೇಳವನ್ನು ಇನ್ಫೋಸಿಸ್‌ ಕಂಪನಿ ಪುಣೆ ವಿಭಾಗದ ಹಿರಿಯ ವ್ಯವಸ್ಥಾಪಕಿ ಹೇಮಾವತಿ ಕೋರಾಳಿ ಉದ್ಘಾಟಿಸಿದರು   

ಬೆಳಗಾವಿ: ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಕಾಲೇಜಿನ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಎರಡು ದಿನಗಳ ತಾಂತ್ರಿಕ ಮೇಳ ‘ಟೆಕ್ನೋ ಸ್ಪಾರ್ಕ್-2019’ ಇತ್ತೀಚಿಗೆ ನಡೆಯಿತು.

ಇನ್ಫೋಸಿಸ್‌ ಕಂಪನಿಯ ಪುಣೆ ವಿಭಾಗದ ಹಿರಿಯ ವ್ಯವಸ್ಥಾಪಕಿ ಹೇಮಾವತಿ ಕೋರಾಳಿ ಉದ್ಘಾಟಿಸಿ ಮಾತನಾಡಿ, ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ಷೀಪ್ರ ಬೆಳವಣಿಗೆಗಳು ಆಗುತ್ತಿವೆ. ಇದರಿಂದ ಅವಕಾಶಗಳು ದೊರೆಯುತ್ತಿವೆ‌’ ಎಂದರು.

ತಾಂತ್ರಿಕ ಚರ್ಚಾ ಗೋಷ್ಠಿ, ಡಿಸೈನ್ ಥಿಂಕಿಂಗ್ ಸ್ಪರ್ಧೆ, ಮೊಬೈಲ್ ಆಫ್‌ ಡೆವಲಪ್ಮೆಂಟ್, ಅಲೋಗೋರಿದಮ್ ಡಿಸೈನ್ ಹೀಗೆ ಹಲವು ಸ್ಪರ್ಧೆಗಳಲ್ಲಿ 200 ವಿದ್ಯಾರ್ಥಿಗಳು ಭಾಗವಹಸಿದ್ದರು.

ADVERTISEMENT

ವಿಭಾಗದ ಮುಖ್ಯಸ್ಥ ಹರೀಶ್ ಎಚ್. ಕೆಂಚೆನ್ನವರ ಸ್ವಾಗತಿಸಿದರು. ಮೇಳದ ಸಂಯೋಜಕ ಪ್ರೊ.ಎಸ್.ಬಿ. ದೇಶಪಾಂಡೆ ಹಾಗೂ ಪ್ರೊ.ಎಸ್.ಡಿ. ಪೇರೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.