ಗೋಕಾಕ: ತನ್ನ ಕುಟುಂಬ ವರ್ಗ, ನೆರೆ-ಹೊರೆಯವರೊಂದಿಗೆ ಹೊಂದಿದ್ದ ಭಿನ್ನಾಭಿಪ್ರಾಯದ ಕುರಿತು ವಿಚಾರಣೆಗೆ ಬಂದಿದ್ದ ಶಹರ ಠಾಣೆ ಸಬ್ ಇನ್‌ಸ್ಪೆಕ್ಟರ್ ನಿಲುವನ್ನು ಖಂಡಿಸಿ, ಯುವಕನೊಬ್ಬ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆಯಿತು.
ಬುಧವಾರ ತಡರಾತ್ರಿಯೇ ಶಹರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ತಮ್ಮ ಗಸ್ತು ಸಿಬ್ಬಂದಿಯೊಂದಿಗೆ ಆದಿಜಾಂಬವ ನಗರ ಬಡಾಣೆಗೆಗೆ ಭೇಟಿ ನೀಡಿದ್ದರು. ಇದರಿಂದ ಯುವಕ ಗುರುವಾರ ಮಧ್ಯಾಹ್ನ ಏಕಾಏಕಿ ತನ್ನ ನೂರಾರು ಬೆಂಬಲಿಗರೊಂದಿಗೆ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು, ಪೊಲೀಸರ ಅತಿಕ್ರಮಣದಿಂದ ತಾನು ಖಿನ್ನತೆಗೊಳಗಾಗಿದ್ದು ಆತ್ಮಹತ್ಯೆಗೆ ಶರಣಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಕಿರುಚಾಡುತ್ತ ಸಾರ್ವಜನಕರು ಸಮ್ಮುಖದಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನೆರೆದಿದ್ದ ಜನರೇ ಆತನ ರಕ್ಷಣೆಗೆ ಧಾವಿಸಿ ಅವಘಡವನ್ನು ತಪ್ಪಿಸಿದರು. ಈ ಕುರಿತು ಯಾವುದೇ ದೂರುಗಳು ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.