ADVERTISEMENT

ಪತ್ರಕರ್ತರ ವೇದಿಕೆ: ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:31 IST
Last Updated 31 ಜನವರಿ 2026, 8:31 IST
ಚಿತ್ರ: 30ಜಿಕೆಕೆ1 ಗೋಕಾಕದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಯ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು.
ಚಿತ್ರ: 30ಜಿಕೆಕೆ1 ಗೋಕಾಕದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆಯ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಪದಾಧಿಕಾರಿಗಳು.   

ಗೋಕಾಕ: ಕರ್ನಾಟಕ ರಾಜ್ಯ ಪತ್ರಕರ್ತರ ವೇದಿಕೆ ಗೋಕಾಕ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಶುಕ್ರವಾರ ವೇದಿಕೆ ರಾಜ್ಯಾಧ್ಯಕ್ಷ ಅಶೋಕ ಭಜಂತ್ರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೇಮಕ ಮಾಡಲಾಯಿತು.

ಜಗದೀಶ್ ಈಶ್ವರ ಮಂಡಿ ಮತ್ತು ಅಶ್ಪಾಕ ಮುಜಾವರ ((ಉಪಾಧ್ಯಕ್ಷರು) ಶಫೀಕಅಲಿ ಮುಲ್ಲಾ (ಪ್ರಧಾನ ಕಾರ್ಯದರ್ಶಿ), ಶಶಿಕಾಂತ ಕುರಬೇಟ (ಸಹ ಕಾರ್ಯದರ್ಶಿ), ದುಂಡಪ್ಪ ರೆಡ್ಡಿ (ಖಜಾಂಚಿ) ಮತ್ತು ಚಿದಾನಂದ ಗೌಡರ (ಪತ್ರಿಕಾ ಛಾಯಾ ಗ್ರಾಹಕ) ನೇಮಕಗೊಂಡಿದ್ದಾರೆ.

ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷ ಜೈನುಲ್ಲಾ ಅಂಕಲಗಿ, ಉತ್ತರ ಕರ್ನಾಟಕ ಅಧ್ಯಕ್ಷ ಮಾನಿಂಗ ನೀಲನ್ನವರ, ಜಿಲ್ಲಾ ಘಟಕದ ಅಧ್ಯಕ್ಷ ಶಶಿ ಕನ್ನಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮು ಮರೆನ್ನವರ, ಗೋಕಾಕ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಲಕ್ಷ್ಮಣ್ ಖಡಕಬಾಂವಿ, ಸಾದಿಕ ಹಲ್ಯಾಳ, ರಾಜು ನಾಯಿಕ ಶಿವಲಿಂಗ ಸಂಬಳ, ಶಶಿಕಾಂತ ದಂಡುಗೋಳ, ಬಾಹುರಾಜ ಮುನ್ಯಾಳ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.