ADVERTISEMENT

ಗೋಕಾಕ | ಜೀವ ಬೆದರಿಕೆ: ನಾಲ್ವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:16 IST
Last Updated 27 ಅಕ್ಟೋಬರ್ 2025, 2:16 IST
   

ಗೋಕಾಕ: ಎರಡು ವರ್ಷಗಳ ಹಿಂದೆ ಪಡೆದಿದ್ದ ₹ 7 ಲಕ್ಷ ಮರಳಿ ಕೊಡುವಂತೆ ಒತ್ತಾಯಿಸಿದ್ದಕ್ಕೆ, ಫಿರ್ಯಾದಿದಾರ ಮತ್ತು ಇತರ ಮೂವರಿಗೆ ಅ. 1ರಂದು ಜೀವ ಬೆದರಿಕೆ ಹಾಕಿದ್ದ ನಾಲ್ವರ ವಿರುದ್ಧ  ಶನಿವಾರ ದಿ. 25ರಂದು ಪ್ರಕರಣ ದಾಖಲಾಗಿದೆ.

ಆಪಾದಿತರನ್ನು ನಗರದ ಮೋಹಿನ ಇಮ್ತಿಯಾಜ ಜಮಾದಾರ, ಮೊಹ್ಮದಗೌಸ ಇಮ್ತಿಯಾಜ್‌ ಜಮಾದಾರ, ಪ್ರಸಾದ ಸುಭಾಷ ಸುತಾರ ಮತ್ತು ವಿಶ್ವನಾತ ಸುಭಾಷ ಸುತಾರ ಎಂದು ಗುರುತಿಸಲಾಗಿದೆ.

ದೂರುದಾರ ನಗರದ ಉಪ್ಪಾರಗಲ್ಲಿ ನಿವಾಸಿ ಧರೆಪ್ಪ ಸಾಯಿನಾಥ ಶಿಂಗಳಾಪೂರ ಎಂಬಾತ ತನಗೆ ಮತ್ತು ಘಟನೆಯಲ್ಲಿ ತನ್ನನ್ನು ಬೆಂಬಲಿಸಿ ಆಪಾದಿತರಿಂದ ಹಲ್ಲೆಗೆ ಒಳಗಾದ ಪ್ರಕಾಶ ಶಂಕರ ಗುದಗ್ಗೋಳ, ಹಣಮಂತ ಮಲ್ಲಪ್ಪ ಹುಳ್ಯಾಗೋಳ ಮತ್ತು ಮಣಿಕಂಠ ರಾಮಚಂದ್ರ ಬಡೆಪ್ಪಗೋಳ ಅವರಿಗೂ ಬೆದರಿಕೆ ಹಾಕಿದ್ದ  ವಿರುದ್ಧ ಶಹರ ಪೊಲೀಸ್‌ ಠಾಣೆಯಲ್ಲಿ ಆಪಾದಿತರ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ ಶಹರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.