ADVERTISEMENT

ಚಿನ್ನದ ಸರ ಕಳವು: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 15:51 IST
Last Updated 3 ಅಕ್ಟೋಬರ್ 2020, 15:51 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಹೊರವಲಯದಲ್ಲಿ ಚಿನ್ನದ ಸರ ಕಳವು ಮಾಡಿದ್ದ ಆರೋಪದ ಮೇಲೆ ಕಿತ್ತೂರು ಠಾಣೆ ಪೊಲೀಸರು ಮೂವರನ್ನು ಶುಕ್ರವಾರ ಬಂಧಿಸಿದ್ದಾರೆ
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಹೊರವಲಯದಲ್ಲಿ ಚಿನ್ನದ ಸರ ಕಳವು ಮಾಡಿದ್ದ ಆರೋಪದ ಮೇಲೆ ಕಿತ್ತೂರು ಠಾಣೆ ಪೊಲೀಸರು ಮೂವರನ್ನು ಶುಕ್ರವಾರ ಬಂಧಿಸಿದ್ದಾರೆ   

ಬೆಳಗಾವಿ: ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವರಶೀಗಿಹಳ್ಳಿ ಹೊರವಲಯದಲ್ಲಿ ಹುಲ್ಲಿನ ಹೊರೆ ಹೊತ್ತು ಹೋಗುತ್ತಿದ್ದ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಆರೋಪದ ಮೇಲೆ ಮೂವರನ್ನು ಕಿತ್ತೂರು ಠಾಣೆ ಪೊಲೀಸರುಶುಕ್ರವಾರ ಬಂಧಿಸಿದ್ದಾರೆ.

ದೇವರಶೀಗಿಹಳ್ಳಿ ಗ್ರಾಮದ ನಾಗೇಶ ದೊಡಮನಿ, ವಿಜಯ ಮದನಬಾವಿ ಮತ್ತು ಚೇತನ ಹಿರೇಮಠ ಬಂಧಿತರು. ಅವರಿಂದ, ಕಳವು ಮಾಡಿದ್ದ ₹ 1.40 ಲಕ್ಷ ಮೌಲ್ಯದ 35 ಗ್ರಾಂ. ತೂಕದ ಚಿನ್ನದ ಸರ, ದ್ವಿಚಕ್ರ ವಾಹನ, ₹ 10 ಸಾವಿರ, 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತನ್ನಿಂದ ಸೆ.23ರಂದು ಸರ ಕಿತ್ತುಕೊಂಡು ಹೋಗ ಬಗ್ಗೆ ರಾಮನಗೌಡ ಪಾಟೀಲ ದೂರು ನೀಡಿದ್ದರು. ಸಿಪಿಐ ಮಂಜುನಾಥ ಕುಸುಗಲ್, ಪಿಎಸ್‌ಐ ಎಸ್.ಬಿ. ಮಾವಿನಕಟ್ಟಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತಂಡವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಶಂಸಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.