
ಪ್ರಜಾವಾಣಿ ವಾರ್ತೆ
ಗೋಕಾಕ: ತಾಲ್ಲೂಕಿನ ಮೆಳವಂಕಿ ಗ್ರಾಮದಲ್ಲಿ ಮನೆಯೊಂದರ ಕೀಲಿ ಮುರಿದು ಒಳಗೆ ಹೊಕ್ಕ ಕಳ್ಳರು ಚಿನ್ನ ಮತ್ತು ಬೆಳ್ಳಿಯ ₹ 5.40 ಮೌಲ್ಯದ ಆಭರಣ, ₹ 50,000 ನಗದು ಕಳವು ಮಾಡಿದ ಘಟನೆ ಈಚೆಗೆ ನಡೆದಿದೆ.
ಕಳವು ನಡೆದ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದ ಭಾರತಿ ನಾಗರಾಜ ಬಾಕಳೆ ಅವರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಅದೇ ದಿನ ಮೆಳವಂಕಿ ಗ್ರಾಮದಲ್ಲಿ ಮತ್ತೊಂದು ಮನೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ₹ 1.64 ಮೌಲ್ಯದ ಆಭರಣ, ₹ 25,000 ನಗದು ಕಳವಾಗಿದೆ.
ಲಕ್ಷ್ಮವ್ವ ಸಿದ್ದಾರೂಢ ಬಬಲೆಪ್ಪನವರ ಮತ್ತು ನಿಂಗವ್ವ ಕರೆಪ್ಪ ಕಮತಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.